ನವದೆಹಲಿ: ‘ದೆಹಲಿಯ ಮುಂಬರುವ ವಿಧಾನಸಭಾ ಚುನಾವಣೆಯೂ ಮಹಾಭಾರತದ ಧರ್ಮಯುದ್ಧದಂತೆ ಆಗಿದೆ’ ಎಂದು ಆಪ್ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಚಾಂದಿನಿ ಚೌಕ್ನಲ್ಲಿ ಭಾನುವಾರ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿ ಪಾಲಿಕೆ ಚುನಾವಣೆಯಲ್ಲಿ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನಿಸಿದರೂ, ದೈವಿಕ ಶಕ್ತಿಗಳು ನಮ್ಮ ಪರವಾಗಿದ್ದರಿಂದ ಗೆಲುವು ಪಡೆದುಕೊಂಡೆವು’ ಎಂದು ತಿಳಿಸಿದರು.

‘ಆಪ್ ಸಂದೇಶಗಳನ್ನು ಪ್ರತಿ ಮತದಾರರಿಗೂ ತಲುಪಿಸಲು ಬೂತ್ ಹಾಗೂ ಜಿಲ್ಲಾ ಮಟ್ಟದ ಕಾರ್ಯಕರ್ತರು 65 ಸಾವಿರ ಸ್ಥಳೀಯ ಸಭೆಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ಸಾಧನೆ ಆಧರಿಸಿ ಮತ ಕೇಳಿ: ‘ದೆಹಲಿಯ ಕಾಲೊನಿಗಳಲ್ಲಿ ಆಪ್ ಪಕ್ಷವು 10 ಸಾವಿರ ಕಿ.ಮೀ ರಸ್ತೆ ನಿರ್ಮಿಸಿದ್ದು, ಬಿಜೆಪಿ ಅಧಿಕಾರ ಹೊಂದಿರುವ 20 ರಾಜ್ಯಗಳಲ್ಲಿ ಇಷ್ಟು ರಸ್ತೆ ನಿರ್ಮಿಸಿಲ್ಲ. ಪಕ್ಷದ ಸಾಧನೆ ಆಧರಿಸಿ ಮತಯಾಚಿಸಬೇಕು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.