ನವದಹೆಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಅವರು ಸೆ.21ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ.

ಆತಿಶಿ ಜತೆಗೆ ಇತರ ನಾಯಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಂಬರುವ ವಿಧಾನಸಬಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ರಚಿಸಲು ಎಎಪಿ ಯೋಜಿಸಿದ್ದು, ಹೊಸ ಮಂತ್ರಿಮಂಡಲದಲ್ಲಿ ಅರವಿಂದ್ ಕೇಜ್ರಿವಾಲ್ ಸಂಪುಟದ ಎಲ್ಲಾ ಸಚಿವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೂ ಇಬ್ಬರು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಸಂಭವವಿದೆ.

ಮೂಲಗಳ ಪ್ರಕಾರ, ಗೋಪಾಲ್ ರೈ, ಕೈಲಾಶ್ ಗೆಹಲೋತ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರನ್ನು ಉಳಿಸಿಕೊಂಡು, ಕರೋಲ್ ಬಾಗ್ ಶಾಸಕ ವಿಶಾಲ್ ರವಿ ಮತ್ತು ಕೊಂಡ್ಲಿ ಶಾಸಕ ಕುಲದೀಪ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.

ಶಿಕ್ಷಣ, ಹಣಕಾಸು, ಕಂದಾಯ, ಲೋಕೋಪಯೋಗಿ, ವಿದ್ಯುತ್ ಸೇರಿದಂತೆ ಕೇಜ್ರಿವಾಲ್ ಸರ್ಕಾರದಲ್ಲಿ ಆತಿಶಿ 13 ಇಲಾಖೆಗಳನ್ನು ನಿರ್ವಹಿಸುತ್ತಿದ್ದರು. ಈಗ ಆತಿಶಿ ಮುಖ್ಯಮಂತ್ರಿಯಾದ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕಾಗಿದೆ.

ದೆಹಲಿಯ ಹೊಸ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಹೊಸ ಸರ್ಕಾರವು ಸೆ. 26 ಮತ್ತು 27 ರಂದು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತಯಾಚಿಸಲಿದೆ.
.ಕೇಜ್ರಿವಾಲ್ ರಾಜೀನಾಮೆ ರಾಷ್ಟ್ರಪತಿಗೆ ವರ್ಗಾವಣೆ; ಸೆ.21ರಂದು ಆತಿಶಿ ಪ್ರಮಾಣ!.ಪ್ರಣಾಳಿಕೆ ತಯಾರಿಯಿಂದ ಮುಖ್ಯಮಂತ್ರಿಗಾದಿವರೆಗೆ ಆತಿಶಿ ಹಾದಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.