ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಅತಿಶಿ, ದೆಹಲಿ ಗ್ಯಾಂಗ್ಸ್ಟರ್ಗಳ ರಾಜಧಾನಿಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತಾ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ವಾರ ಕೊಲೆಯಾದ 28 ವರ್ಷದ ಯುವಕನ ಪೋಷಕರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅತಿಶಿ, ‘ದೆಹಲಿಯಲ್ಲಿ ಅಪರಾಧ ಕೃತ್ಯಗಳನ್ನು ಮಾಡುವವರಿಗೆ ಭಯ ಇಲ್ಲದಂತಾಗಿದೆ. ಯಾರ ಮೇಲೆ ಬೇಕಾದರೂ ಗುಂಡು ಹಾರಿಸಬಹುದು, ಯಾರನ್ನೂ ಬೇಕಾದರೂ ಕೊಲೆ ಮಾಡಬಹುದು. ಪೊಲೀಸರು ಏನೂ ಮಾಡುವುದಿಲ್ಲ ಎನ್ನುವ ಮನಸ್ಥಿತಿಯಿದೆ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯೂ ದೇಶದ ಗೃಹ ಸಚಿವಾಲಯದ ಅಡಿಯಲ್ಲಿಯೇ ಬರುತ್ತದೆ ಎಂದು ಅಮಿತ್ ಶಾ ಅವರಿಗೆ ನೆನಪಿಸುತ್ತೇನೆ. ದೆಹಲಿ ಜನರಿಗಾಗಿ ಅವರು ಏನು ಮಾಡಿದ್ದಾರೆ? ಚುನಾವಣಾ ಪ್ರಚಾರ ಅಭಿಯಾನಗಳನ್ನು ಹೊರತುಪಡಿಸಿ ಗೃಹ ಸಚಿವರು ಯಾವ ಕೆಲಸವನ್ನೂ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.

ಕೊಲೆಯಾದ ಯುವಕನ ಕುಟುಂಬಕ್ಕೆ ಅತಿಶಿ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕಳೆದ ವಾರ 28 ವರ್ಷದ ಯುವಕನ ಮೇಲೆ ಆತನ ಇಬ್ಬರು ಸಹೋದರ ದಾಳಿ ನಡೆಸಿ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.