ನವದೆಹಲಿ: ಅಲ್–ಖೈದಾ ಭಯೋತ್ಪಾದಕ ಸಂಘಟನೆಯ ಜಾಲವನ್ನು ಭೇದಿಸಿ, ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 14 ಉಗ್ರರನ್ನು ಬಂಧಿಸಿದ್ದೇವೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಗುಪ್ತಚರ ಮಾಹಿತಿ ಆಧರಿಸಿ ರಾಜ್ಯಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಪೊಲೀಸ್, 'ಸದ್ಯದ ಮಾಹಿತಿ ಪ್ರಕಾರ, ರಾಂಚಿಯ (ಜಾರ್ಖಂಡ್) ಡಾ. ಇಷ್ತಿಯಾಕ್ ಎಂಬಾತ ಗುಂಪಿನ ನೇತೃತ್ವ ವಹಿಸಿದ್ದ. ಸಂಘಟನೆಯು ದೇಶದಾದ್ಯಂತ ಉಗ್ರ ಕೃತ್ಯಗಳನ್ನು ನಡೆಸಲು ಯೋಜಿಸಿತ್ತು' ಎಂದು ತಿಳಿಸಿದೆ.

ಉಗ್ರ ಸಂಘಟನೆಯ ಸದಸ್ಯರಿಗೆ ಶಸ್ತ್ರಾಸ್ತ್ರ ನಿರ್ವಹಣೆ, ಸರಬರಾಜು ಸೇರಿದಂತೆ ತರಬೇತಿ ನೀಡಲಾಗಿತ್ತು ಎಂದೂ ಹೇಳಿದೆ.

ಅಭ್ಯಾಸ ನಿರತರಾಗಿದ್ದ ಆರು ಮಂದಿಯನ್ನು ರಾಜಸ್ಥಾನದ ಭಿವಾಡಿಯಲ್ಲಿ ಮತ್ತು ಉಳಿದ ಎಂಟು ಉಗ್ರರನ್ನು ಜಾರ್ಖಂಡ್, ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಸದ್ಯ ಅವರನ್ನೆಲ್ಲ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತಷ್ಟು ಉಗ್ರರನ್ನು ಬಂಧಿಸುವ ನಿರೀಕ್ಷೆಯಲ್ಲಿದ್ದೇವೆ. ದಾಳಿ ವೇಳೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.