ನವೆದಹಲಿ: ದೆಹಲಿ ಹಾಗೂ ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದುಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕಿಡಿಕಾರಿದೆ.

ಎಸ್‌ಕೆಎಂ ಕರೆ ನೀಡಿರುವ ಹಾಗೂ ಜಂತರ್ ಮಂತರ್‌ನಲ್ಲಿ ಸೋಮವಾರ ಆಯೋಜಿಸಲಾಗಿರುವ 'ಕಿಸಾನ್ ಮಹಾಪಂಚಾಯಿತಿ' ಹಿನ್ನೆಲೆಯಲ್ಲಿ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ರೈತರು ಆಗಮಿಸಿದ್ದಾರೆ.

ರೈತರು ಜಂತರ್ ಮಂತರ್ ತಲುಪದಂತೆಕೆಲವು ಸ್ಥಳಗಳಲ್ಲಿ ತಡೆಯಲಾಗಿದೆ ಎಂದು ಎಸ್‌ಕೆಎಂ ನಾಯಕರು ಆರೋಪಿಸಿದ್ದಾರೆ. ಆದರೆ, ಇದನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.

'ಮಹಾಪಂಚಾಯಿತಿ,ಕನಿಷ್ಠ ಬೆಂಬಲ ಬೆಲೆ ನೀತಿಗೆ ಕಾನೂನಾತ್ಮಕಖಾತರಿ, ವಿದ್ಯುತ್ ತಿದ್ದುಪಡಿ ಮಸೂದೆ–2022 ರದ್ದು ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಸುತ್ತಿರುವ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದೆ' ಎಂದು ಎಸ್‌ಕೆಎಂ ಸದಸ್ಯ ಹಾಗೂ ಮಹಾಪಂಚಾಯತ್ ಸಂಘಟಕ ಅಭಿಮನ್ಯು ಸಿಂಗ್ ಕೊಹರ್ ಹೇಳಿದ್ದಾರೆ.

ರೈತರು ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ಆಗಮಿಸಿರುವ ರೈತರನ್ನು ಭಾನುವಾರ ರಾತ್ರಿಯೇ ತಡೆಯಲಾಗಿದ್ದು, ಜಂತರ್ ಮಂತರ್‌ಗೆ ತಲುಪಲು ಅವಕಾಶ ನಿರಾಕರಿಸಲಾಗಿದೆ. ಅವರನ್ನು (ರೈತರನ್ನು) ಗುರುದ್ವಾರದ ಬಂಗ್ಲಾ ಸಾಹೀಬ್, ರಾಕಬ್‌ಗಂಜ್ ಹಾಗೂ ಮೋತಿ ಬಾಗ್‌ಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಗಿದೆ ಎಂದುಅಭಿಮನ್ಯು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.