ನವದೆಹಲಿ: ಧನ್ತೆರಸ್ (ಧನ ತ್ರಯೋದಶಿ) ದಿನ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುವ ಬದಲು ಕಬ್ಬಿಣದ ಖಡ್ಗ ಖರೀದಿಸಿ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡ ಗಜರಾಜ್ ರಾಣಾ ಜನರಿಗೆ ಕರೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಶೀಘ್ರದಲ್ಲೇ ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟಿಸಲಿದ್ದು, ಇದು ರಾಮಮಂದಿರದ ಪರವಾಗಿರುತ್ತದೆ ಎಂಬುದ ನಮ್ಮ ವಿಶ್ವಾಸ. ಈ ಹೊತ್ತಲ್ಲಿ ನಮ್ಮ ಸುತ್ತಮುತ್ತಅಹಿತಕರವಾದ ಘಟನೆಗಳು ನಡೆಯಬಹುದು. ಹಾಗಾಗಿಧನ್ತೆರಸ್ ದಿನ ಚಿನ್ನಾಭರಣ ಮತ್ತು ಬೆಳ್ಳಿ ಪಾತ್ರೆಗಳನ್ನು ಖರೀದಿಸುವ ಬದಲು ಕಬ್ಬಿಣದ ಖಡ್ಗ ಖರೀದಿಸಿ ಶೇಖರಿಸಿಡಿ. ಈ ರೀತಿಯ ಪರಿಸ್ಥಿತಿಯಲ್ಲಿ ನಿಮ್ಮ ರಕ್ಷಣೆಗೆ ಖಡ್ಗ ಸಹಾಯಕ್ಕೆ ಬರುತ್ತದೆ ಎಂದು ದೇವ್ಬಂದ್ ನಗರಬಿಜೆಪಿ ಅಧ್ಯಕ್ಷ ಗಜರಾಜ್ ರಾಣಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಈ ಹೇಳಿಕೆ ಬಗ್ಗೆ ಆನಂತರ ಸ್ಪಷ್ಟನೆ ನೀಡಿದ ರಾಣಾ, ನನ್ನದು ಸಲಹೆ ಮಾತ್ರ, ಅದಕ್ಕೆ ಬೇರೆ ಅರ್ಥಕಲ್ಪಿಸಬೇಡಿ ಎಂದಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಆ ಸಂದರ್ಭಕ್ಕೆ ತಕ್ಕಂತೆ ನಮ್ಮ ದೇವ, ದೇವತೆಗಳು ಬಳಸಿದ್ದ ಆಯುಧವನ್ನು ನಾವು ಪೂಜಿಸುತ್ತೇವೆ. ಬದಲಾಗುತ್ತಿರುವ ಈಗಿನ ಪರಿಸ್ಥಿತಿ ಬಗ್ಗೆ ಮತ್ತು ನನ್ನ ಸಮುದಾಯದನವರನ್ನು ಉದ್ದೇಶಿಸಿ ಹೇಳಿದ್ದೇನೆ. ಈ ಬಗ್ಗೆ ಹೆಚ್ಚು ಪರಾಮರ್ಶೆ ಅಗತ್ಯವಿಲ್ಲ ಎಂದು ರಾಣಾ ಹೇಳಿದ್ದಾರೆ.

ರಾಣಾ ಅವರ ಹೇಳಿಕೆ ಬಗ್ಗೆ ಅಂತರ ಕಾಯ್ದುಕೊಂಡ ಉತ್ತರ ಪ್ರದೇಶದ ಬಿಜೆಪಿ ವಕ್ತಾರ ಚಂದ್ರಮೋಹನ್, ಬಿಜೆಪಿ ಈ ರೀತಿಯ ಹೇಳಿಕೆಗಳಿಗೆ ಬೆಂಬಲ ನೀಡುವುದಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷದ ನಾಯಕರಿಗೆ ಸ್ಪಷ್ಟವಾದ ನೀತಿ ನಿಯಮಗಳಿವೆ. ಕಾನೂನು ಬಾಹಿರವಾದ ಯಾವುದೇ ಹೇಳಿಕೆ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರೂ ಕಾನೂನುಗಿಂತ ಮೇಲು ಅಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.