ನವದೆಹಲಿ: ಕಾನೂನು ದಬ್ಬಾಳಿಕೆಯ ಸಾಧನವಾಗದೆ ನ್ಯಾಯದ ಸಾಧನವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಕೇವಲ ನ್ಯಾಯಮೂರ್ತಿಗಳದ್ದಾಗದೆ ನಿರ್ಧಾರ ತೆಗೆದುಕೊಳ್ಳುವ ಪ್ರತಿಯೊಬ್ಬರದ್ದಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಶನಿವಾರ ಹೇಳಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ನಾಗರಿಕರು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಆದರೆ ನಾವು ನ್ಯಾಯಾಲಯಗಳ ಮಿತಿಗಳನ್ನು ಮತ್ತು ಸಾಮರ್ಥ್ಯವನ್ನು ತಿಳಿದುಕೊಂಡಿರಬೇಕು’ ಎಂದರು.

‘ಕೆಲವೊಮ್ಮೆ ಕಾನೂನು ಮತ್ತು ನ್ಯಾಯ ಒಂದೇ ರೇಖೆಯ ಪಥವನ್ನು ಅನುಸರಿಸುವುದಿಲ್ಲ. ಕಾನೂನು ನ್ಯಾಯದ ಸಾಧನವೂ ಆಗಬಹುದು ದಬ್ಬಾಳಿಕೆಯ ಸಾಧನವೂ ಆಗಬಹುದು. ಹಿಂದೆ ವಸಹಾತುಶಾಹಿ ಕಾಲದಲ್ಲಿ ಇಂದು ಪುಸ್ತಕಗಳಲ್ಲಿರುವ ಅದೇ ಕಾನೂನು ದಬ್ಬಾಳಿಕೆಯ ಸಾಧನವಾಗಿ ಬಳಕೆಯಾಗಿದ್ದು ನಮಗೆಲ್ಲರಿಗೂ ತಿಳಿದಿದೆ’ ಎಂದಿದ್ದಾರೆ.

ನ್ಯಾಯಾಂಗ ಸಂಸ್ಥೆಗಳನ್ನು ದೀರ್ಘಕಾಲದವರೆಗೆ ಕಾಪಾಡುವುದು ಸಹಾನುಭೂತಿ ಪ್ರಜ್ಞೆ ಮತ್ತು ನಾಗರಿಕರ ಕೂಗಿಗೆ ಉತ್ತರ ನೀಡುವ ಸಾಮರ್ಥ್ಯ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರಿಗೆ ಸೌಲಭ್ಯಗಳ ನಿರಾಕರಣೆ:

ಕಾನೂನು ವೃತ್ತಿಯ ರಚನೆಯಲ್ಲಿನ ಊಳಿಗಮಾನ್ಯ, ಪಿತೃಪ್ರಧಾನ ವ್ಯವಸ್ಥೆಯು ಮಹಿಳೆಯರಿಗೆ ಸೌಲಭ್ಯಗಳನ್ನು ನಿರಾಕರಿಸುತ್ತಿದೆ ಎಂದೂ ಚಂದ್ರಚೂಡ್ ಅವರು ಹೇಳಿದ್ದಾರೆ.

ಕಡೆಗಣನೆಗೆ ಒಳಗಾದ ಸಮಾಜದವರು ಮತ್ತು ಮಹಿಳೆಯರು ಈ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರಜಾಸತ್ತಾತ್ಮಕ ಮತ್ತು ಅರ್ಹತೆಯ ಆಧಾರದ ಪ್ರಕ್ರಿಯೆ ಅಗತ್ಯ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.