ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ವಿಕಾಸ್ ಯಾದವ್ ಅವರನ್ನು ಸುಲಿಗೆ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲಿಸರು ಕಳೆದ ಡಿಸೆಂಬರ್ನಲ್ಲಿ ಬಂಧಿಸಿದ್ದರು ಎಂದು ಮೂಲಗಳು ಹೇಳಿವೆ.

ದೆಹಲಿಯ ರೋಹಿಣಿ ಪ್ರದೇಶದ ಉದ್ಯಮಿಯೊಬ್ಬರನ್ನು ಅಪಹರಿಸಿ, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪವನ್ನು ಯಾದವ್ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 39 ವರ್ಷದ ಯಾದವ್ ಅವರನ್ನು ಡಿಸೆಂಬರ್ 18ರಂದು ಬಂಧಿಸಲಾಗಿತ್ತು. ಅವರಿಗೆ ನ್ಯಾಯಾಲಯವು ಏಪ್ರಿಲ್ 22ರಂದು ಜಾಮೀನು ನೀಡಿದೆ.

‘ವಿಕಾಸ್ ಯಾದವ್ ಅವರು ಭಾರತದ ಗುಪ್ತಚರ ಸಂಸ್ಥೆ ‘ರಿಸರ್ಚ್ ಆ್ಯಂಡ್ ಅನಲಿಸಿಸ್ ವಿಂಗ್’ನ (ರಾ) ಕಚೇರಿ ಒಳಗೊಂಡಿರುವ ಕ್ಯಾಬಿನೆಟ್ ಸೆಕ್ರೆಟರಿಯೇಟ್ನಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಯಾದವ್ ವಿರುದ್ಧ ನ್ಯೂಯಾರ್ಕ್ನ ನ್ಯಾಯಾಲಯಕ್ಕೆ ಅಲ್ಲಿನ ಪ್ರಾಸಿಕ್ಯೂಟರ್ಗಳು ಗುರುವಾರ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಹೇಳಿದ್ದಾರೆ.

‘ಅಮೆರಿಕ ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ವ್ಯಕ್ತಿ ಭಾರತದ ಉದ್ಯೋಗಿ ಅಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.

ಆರೋಪ ಏನು: ‘ದಕ್ಷಿಣ ದೆಹಲಿಯಲ್ಲಿರುವ ಎನ್ಐಎ ಕಚೇರಿ ಸಮೀಪ ನನ್ನನ್ನು ಭೇಟಿಯಾಗುವಂತೆ ಉದ್ಯಮಿಯೊಬ್ಬರಿಗೆ ವಿಕಾಸ್ ಯಾದವ್ ಡಿಸೆಂಬರ್ 11ರಂದು ಸೂಚಿಸಿದ್ದ. ತಪ್ಪಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಒಡ್ಡಿದ್ದ’ ಎಂದು ಯಾದವ್ ವಿರುದ್ಧ ದಾಖಲಿಸಿರುವ ಎಫ್ಐಆರ್ನಲ್ಲಿ ಪೊಲೀಸರು ಹೇಳಿದ್ದಾರೆ.

‘ಅದೇ ರೀತಿ, ಉದ್ಯಮಿಯು ತನ್ನ ಸ್ನೇಹಿತನ ಜೊತೆ ಸ್ಥಳಕ್ಕೆ ತೆರಳಿ, ಯಾದವ್ ಹಾಗೂ ಆತನೊಂದಿಗೆ ಇದ್ದ ಅಬ್ದುಲ್ಲಾ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದರು’.

‘ಆಗ, ಯಾದವ್ ಮತ್ತು ಅಬ್ದುಲ್ಲಾ ಅವರು ಉದ್ಯಮಿಯನ್ನು ಕಾರೊಂದರ ಒಳಗೆ ನೂಕಿದ್ದರು. ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.

‘ಆರೋಪಿಗಳು, ಖಾಲಿ ಚೆಕ್ವೊಂದರ ಮೇಲೆ ಉದ್ಯಮಿಯ ಸಹಿ ಪಡೆದು, ನಂತರ ಅವರ ಕಾರು ಬಳಿ ಇಳಿಸಿದ್ದರು. ಈ ವಿಷಯವನ್ನು ಬೇರೆ ಯಾರಿಗಾದರೂ ತಿಳಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು’ ಎಂದು ವಿವರಿಸಲಾಗಿದೆ.
.ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಯತ್ನ ಪ್ರಕರಣ: ವಿಕಾಸ್ ವಿರುದ್ಧ ಚಾರ್ಜ್ಶೀಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.