ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಶವಂತ್‌ ಸಿನ್ಹಾರಿಂದ ಹೊಸ ಪಕ್ಷ ಘೋಷಣೆ ಸಾಧ್ಯತೆ

Published : 26 ಆಗಸ್ಟ್ 2024, 15:38 IST
Last Updated : 26 ಆಗಸ್ಟ್ 2024, 15:38 IST
ಫಾಲೋ ಮಾಡಿ
Comments

ಹಜರೀಬಾಗ್‌ (ಜಾರ್ಖಂಡ್‌): ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಅವರು ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಹೊಸ ಪಕ್ಷ ‘ಅಟಲ್‌ ವಿಚಾರ್‌ ಮೋರ್ಚಾ’ವನ್ನು ಘೋಷಿಸುವ ಸಾಧ್ಯತೆ ಇದೆ. ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ತಮ್ಮ ಬೆಂಬಲಿಗರೊಂದಿಗೆ ಇಲ್ಲಿ ಭಾನುವಾರ ಸಭೆ ನಡೆಸಿದ್ದ ಅವರು, ಹೊಸ ಪಕ್ಷ ಕಟ್ಟುವ ವಿಚಾರವನ್ನು ಸಭೆಯ ಮುಂದಿಟ್ಟಿದ್ದರು. ಬೆಂಬಲಿಗರು ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದರು ಮತ್ತು ಈ ಬಗ್ಗೆ ಉತ್ಸಾಹಿತರಾಗಿದ್ದರು ಎನ್ನಲಾಗಿದೆ. ಈ ಪಕ್ಷವು ರಾಜ್ಯ ರಾಜಕಾರಣದಲ್ಲಿ ಪರ್ಯಾಯವಾಗಿ ರೂಪುಗೊಳ್ಳಲಿದೆ ಎಂದು ಸಿನ್ಹಾ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.

ಜಾರ್ಖಂಡ್‌ನಿಂದ ದೆಹಲಿಗೆ ಸೋಮವಾರ ತೆರಳುವ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಿನ್ಹಾ, ‘ಇನ್ನಷ್ಟು ಚರ್ಚೆಯ ಬಳಿಕ ಹೊಸ ಪಕ್ಷ ರೂಪಿಸುವ ಕುರಿತು ನಿರ್ಧಾರ ಪ್ರಕಟಿಸಲಾಗುವುದು. ವಾಜಪೇಯಿ ಅವರ ತತ್ವ ಸಿದ್ಧಾಂತಗಳ ಮೇಲೆ ಪಕ್ಷವು ಕಾರ್ಯನಿರ್ವಹಿಸಲಿದೆ’ ಎಂದರು.

ಬಿಜೆಪಿ ಕಾರ್ಯಕಾರಿಣಿಯ ಮಾಜಿ ಸದಸ್ಯ ಸುರೇಂದ್ರ ಕುಮಾರ್‌ ಸಿನ್ಹಾ, ಬಿಜೆಪಿಯ ಮಾಜಿ ಸಂಸದ ಜಯಂತ್‌ ಸಿನ್ಹಾ ಅವರ ಪ್ರತಿನಿಧಿಯೊಬ್ಬರು ಸಭೆಯ ನೇತೃತ್ವ ವಹಿಸಿದ್ದರು. 1998, 1999 ಹಾಗೂ 2009ರಲ್ಲಿ ಹಜರೀಬಾಗ್‌ ಲೋಕಸಭಾ ಕ್ಷೇತ್ರದಿಂದ ಸಿನ್ಹಾ ಅವರು ಆಯ್ಕೆಯಾಗಿದ್ದರು. 2004ರಲ್ಲಿ ಸಿಪಿಐ ಅಭ್ಯರ್ಥಿ ಎದುರು ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT