ನವದೆಹಲಿ:ಸಾಲ್ಮೊನೆಲ್ಲಾ ಬ್ಯಾಕ್ಟೀರಿಯ ಸೋಂಕಿನ ಆತಂಕದಹಿನ್ನೆಲೆಯಲ್ಲಿಇಟಲಿಯ ಚಾಕೋಲೆಟ್ ಉತ್ಪನ್ನಗಳ ಸಂಸ್ಥೆಫೆರೆರೊತನ್ನಕಿಂಡರ್ ಚಾಕೋಲೆಟ್ಗಳನ್ನು ಅಮೆರಿಕ, ಯುರೋಪ್ ದೇಶಗಳುಮತ್ತು ಏಷ್ಯಾದ ಹಲವು ದೇಶಗಳ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದುಕೊಂಡಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಅದು ಹಿಂದಕ್ಕೆ ಪಡೆದುಕೊಂಡಿಲ್ಲ.

ಇದನ್ನೂ ಓದಿ:ಸಾಲ್ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್ ಚಾಕೋಲೆಟ್ ಕಾರ್ಖಾನೆ ಬಂದ್

ಫ್ರಾನ್ಸ್ನಲ್ಲಿಸಾಲ್ಮೊನೆಲ್ಲಾ ಬ್ಯಾಕ್ಟಿರಿಯಾದ 21 ಸೋಂಕು ಪ್ರಕರಣಗಳು ವರದಿಯಾಗಿವೆ.ಇದರಲ್ಲಿ15 ಕಿಂಡರ್ಚಾಕೋಲೆಟ್ಗಳನ್ನುಸೇವಿಸಿದ್ದವರೇ ಆಗಿದ್ದಾರೆ ಎಂಬುದುಗೊತ್ತಾಗಿದೆ. ಬ್ರಿಟನ್ನಲ್ಲಿಯೂ 63 ಸಾಲ್ಮೊನೆಲ್ಲಾ ಪ್ರಕರಣಗಳು ವರದಿಯಾಗಿವೆ. ಸಾಲ್ಮೊನೆಲ್ಲಾ ಪ್ರಕರಣಗಳಿಗೆ ಕಿಂಡರ್ನ ನಂಟಿರುವ ಬಗ್ಗೆ ಬ್ರಿಟನ್, ಅಮೆರಿಕದ ಆಹಾರ ಸುಕ್ಷತಾ ಪ್ರಾಧಿಕಾರಗಳು ಅನುಮಾನ ವ್ಯಕ್ತಪಡಿಸಿವೆ.

ಕಿಂಡರ್ನಿಂದ ಸೋಂಕು ಹರಡುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಬೆಲ್ಜಿಯಂನ ಕಾರ್ಖಾನೆಯನ್ನು ಶುಕ್ರವಾರ ಮುಚ್ಚಲಾಗಿದೆ. ಅಲ್ಲದೆ, ಬ್ರಿಟನ್, ಜರ್ಮನಿ, ಫ್ರಾನ್ಸ್,ಹಾಂಗ್ಕಾಂಗ್, ಸಿಂಗಾಪುರ ಮತ್ತು ಅಮೆರಿಕದಿಂದ ಚಾಕೋಲೆಟ್ ಉತ್ಪನ್ನಗಳನ್ನು ಫೆರೆರೊ ಹಿಂದಕ್ಕೆ ಪಡೆದಿದೆ.

'ಮಾರುಕಟ್ಟೆಗೆಗೆಬಿಡುಗಡೆಯಾದ ಕಿಂಡರ್ ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ ಇರಲಿಲ್ಲ. ಆದರೆ ಸಾಲ್ಮೊನೆಲ್ಲಾ ಸೋಂಕು ಪತ್ತೆಯಾದ ಬೆಲ್ಜಿಯಂನಲ್ಲಿ ಅವುಗಳನ್ನು ತಯಾರಿಸಿದ ಕಾರಣ ಚಾಕೋಲೆಟ್ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲುನಿರ್ಧಾರಿಸಲಾಗಿದೆ' ಎಂದು ಫೆರೆರೊ ಹೇಳಿದೆ.

ಉತ್ಪನ್ನಗಳನ್ನು ಹಿಂಪಡೆಯುವದೇಶಗಳ ಪಟ್ಟಿಯಿಂದಭಾರತವನ್ನು ಹೊರಗಿಡಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಚಾಕೋಲೆಟ್ ತಯಾರಕ ಸಂಸ್ಥೆ ಫೆರೆರೊ ತಿಳಿಸಿದೆ.ಪುಣೆಯಲ್ಲಿರುವ ತನ್ನಕಾರ್ಖಾನೆಯಲ್ಲಿ ಫೆರೆರೊ ಸಂಸ್ಥೆಯು ಕಿಂಡರ್ ಚಾಕೋಲೆಟ್ಗಳನ್ನುತಯಾರಿಸುತ್ತಿದೆ.

ಸಾಲ್ಮೊನೆಲ್ಲಾ ಎಂಬುದು ಬ್ಯಾಕ್ಟೀರಿಯ.ಅದು ಅತಿಸಾರ, ಜ್ವರ, ಹೊಟ್ಟೆ ನೋವು ಸೇರಿದಂತೆ ಹಲವು ಬಗೆಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆಹಾರದ ಮೂಲಕವೇ ಈ ಸೋಂಕುಹರಡುತ್ತದೆಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.