ನವದೆಹಲಿ: ದೇಶದ ರಾಜಧಾನಿ ದೆಹಲಿ ವಿಶ್ವದ ಅತ್ಯಂತ ಮಾಲಿನ್ಯ ನಗರ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.

ನಿಷೇಧದ ನಡುವೆಯೂ ದೀಪಾವಳಿ ಆಚರಣೆ ವೇಳೆ ಪಟಾಕಿ ಸಿಡಿಸಿದ್ದರಿಂದ ಗಾಳಿಯ ಗುಣಮಟ್ಟ 'ಅತಿ ಕಳಪೆ' ಮಟ್ಟಕ್ಕೆ ತಲುಪಿದೆ. ಗುರುವಾರ ದೀಪಾವಳಿ ಸಂಭ್ರಮಾಚರಣೆಯ ಬಳಿಕ ದಟ್ಟವಾದ ಹೊಗೆ ರಾಜಧಾನಿಯನ್ನು ಆವರಿಸಿತ್ತು.

ಶುಕ್ರವಾರ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 348ರಷ್ಟಿದೆ ಎಂದು ಸ್ವಿಸ್ ಸಂಸ್ಥೆ 'ಐಕ್ಯೂ ಏರ್' ಹೇಳಿದೆ.
.ವಿಶ್ವದ ಅತಿ ಹೆಚ್ಚು ಮಾಲಿನ್ಯ ನಗರ ದೆಹಲಿ: ಷಿಕಾಗೊ ವಿವಿ ವರದಿ.
ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ದೆಹಲಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. 2025ರ ಜನವರಿ 1ರವರೆಗೆ ಇದು ಜಾರಿಯಲ್ಲಿರುತ್ತದೆ ಎಂದೂ ಹೇಳಿತ್ತು.

ಆದರೆ ಹಿಂದೂಗಳ ಹಬ್ಬವನ್ನು ಗುರಿಯಾಗಿಸಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ ಎಂಬ ಬಿಜೆಪಿ ಮತ್ತು ಆರ್ಎಸ್ಎಸ್ ಆರೋಪಿಸಿದ್ದವು. ಈ ಆರೋಪವನ್ನು ಕೇಜ್ರಿವಾಲ್ ತಳ್ಳಿ ಹಾಕಿದ್ದರು.

'ಇದರಲ್ಲಿ ಹಿಂದೂ-ಮುಸ್ಲಿಂ ಧೋರಣೆಯೇ ಇಲ್ಲ. ಪ್ರತಿಯೊಬ್ಬರೂ ಉಸಿರಾಡುವುದು ಮತ್ತು ಪ್ರಾಣ ಮುಖ್ಯ' ಎಂದು ಅವರು ಹೇಳಿದ್ದರು.

'ಮಾಲಿನ್ಯದ ದೃಷ್ಟಿಯಿಂದ ಜನರು ಪಟಾಕಿ ಸಿಡಿಸುವುದನ್ನು ತಡೆಯಬೇಕು ಮತ್ತು ದೀಪಗಳನ್ನು ಬೆಳಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪ್ರತಿಪಾದಿಸಿವೆ' ಎಂದು ಅವರು ಉಲ್ಲೇಖಿಸಿದ್ದರು.

ಭಾರತದಲ್ಲಿ ವಿಶೇಷವಾಗಿ ಚಳಿಗಾಲದ ತಿಂಗಳುಗಳಲ್ಲಿ ದೆಹಲಿ ಸುತ್ತಲಿನ ರಾಜ್ಯಗಳಲ್ಲಿ(ಪಂಜಾಬ್, ಹರಿಯಾಣ) ಭತ್ತದ ಹುಲ್ಲು ಸುಡುವುದು ಸಾಮಾನ್ಯವಾಗಿದೆ. ಕೃಷಿ ತ್ಯಾಜ್ಯ ಸುಡುವುದೂ ನಗರದಲ್ಲಿನ ಮಾಲಿನ್ಯಕ್ಕೆ ಒಂದು ಕಾರಣವಾಗಿದೆ.

ಏನಿದು ಎಕ್ಯೂಐ

ಎಕ್ಯೂಐ ಎಂಬುದು ಗಾಳಿಯಲ್ಲಿನ ವಿವಿಧ ಮಾಲಿನ್ಯಕಾರಕಗಳ ಸಾಂದ್ರತೆಯ ಅಳತೆಯಾಗಿದೆ. ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
.ವಿಶ್ವದ ಅತ್ಯಂತ ಮಾಲಿನ್ಯ ನಗರ: ಅಗ್ರಸ್ಥಾನದಲ್ಲಿ ಪಾಕ್ನ ಪೇಶಾವರ, ಭಾರತದ ನವದೆಹಲಿ.
ದೆಹಲಿ ವಾಯು ಗುಣಮಟ್ಟ ಸ್ಥಿರ: ಡಿಪಿಸಿಸಿ

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕವು ಈ ದೀಪಾವಳಿಯಲ್ಲಿ ಯಾವುದೇ ಮಹತ್ತರ ಬದಲಾವಣೆ ಹೊಂದಿಲ್ಲ ಎಂದು ದೆಹಲಿಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೇಳಿಕೊಂಡಿದೆ. ಬಹುತೇಕರು ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ ಬಳಿಕವೂ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ 24 ಗಂಟೆಗಳ ಸರಾಸರಿ ಎಕ್ಯೂಐ ಗುರುವಾರ 328ಕ್ಕೆ ತಲುಪಿದ್ದು ದೀಪಾವಳಿ ಹಬ್ಬದ ಒಂದು ದಿನದ ನಂತರ 362ಕ್ಕೆ ಏರಿದೆ. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಪಿಎಂ 2.5 ಮಟ್ಟವು ಶೇಕಡಾ 4ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ. 10 ಮೈಕ್ರೋಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಕಣಗಳನ್ನು ಒಳಗೊಂಡಿರುವ ಪಿಎಂ 10 ಮಟ್ಟವು ಶೇ 11ರಷ್ಟು ಹೆಚ್ಚಾಗಿದೆ.

ಕಲುಷಿತ ದೀಪಾವಳಿ: ದೆಹಲಿಯು ಮೂರು ವರ್ಷಗಳಲ್ಲಿ ಅತ್ಯಂತ ಕಲುಷಿತ ದೀಪಾವಳಿಯನ್ನು ದಾಖಲಿಸಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದತ್ತಾಂಶವು ಹೇಳಿದೆ. ಗುರುವಾರ ನಗರದ 24 ಗಂಟೆಗಳ ಸರಾಸರಿ ಎಕ್ಯೂಐ 330ಕ್ಕೆ ದಾಖಲಾಗಿದೆ. 2023ರಲ್ಲಿ 218 ಹಾಗೂ 2022ರಲ್ಲಿ 312 ದಾಖಲಾಗಿತ್ತು. ಹಿಂದಿನ ಈ ಎರಡಕ್ಕೂ ಹೋಲಿಸಿದರೆ ಈ ಬಾರಿ ಹೆಚ್ಚಾಗಿದೆ ಎಂದಿದೆ. ರಾಷ್ಟ್ರ ರಾಜಧಾನಿಯ ಎಕ್ಯೂಐ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ 362ಕ್ಕೆ ಏರಿಕೆಯಾಗುವ ಮೂಲಕ ‘ಅತ್ಯಂತ ಕಳಪೆ’ ವಿಭಾಗದಲ್ಲಿ ದಾಖಲಾಗಿದೆ. 39 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 37ರಲ್ಲಿ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲಿ ವರದಿಯಾಗಿದೆ. ನಗರದಾದ್ಯಂತ ಜಾರಿಗೊಳಿಸಲಾದ ವಿವಿಧ ಮಾಲಿನ್ಯ ನಿಯಂತ್ರಣ ಪ್ರಯತ್ನಗಳಿಂದಾಗಿ ತೀವ್ರವಾದ ಏರಿಕೆ ತಪ್ಪಿದೆ ಎಂದು ವರದಿ ಹೇಳಿದೆ.

ರಾಷ್ಟ್ರ ರಾಜಧಾನಿಯ ಅಸಂಖ್ಯಾತ ಜನರು ಪಟಾಕಿ ಸುಡುವುದರಿಂದ ದೂರ ಉಳಿದರು. ಇದರಿಂದ ಎಕ್ಯೂಐ ಹೆಚ್ಚಲಿಲ್ಲ. ದೆಹಲಿಯ ಜನರಿಗೆ ಕೃತಜ್ಞತೆ ಅರ್ಪಿಸುವೆ
–ಗೋಪಾಲ್ ರಾಯ್, ದೆಹಲಿ ಪರಿಸರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.