ಮುಂಬೈ: ಉದ್ಯಮಿ ,ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ.

ಅಂಬಾನಿ ಒಡೆತನದ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್ಗೆ ಬುಧವಾರ ಬೆದರಿಕೆ ಕರೆ ಬಂದಿದೆ. ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಮತ್ತು ಮುಕೇಶ್, ಪತ್ನಿ ನೀತಾ ಹಾಗೂ ಮಗ ಆಕಾಶ್ ಅಂಬಾನಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಬುಧವಾರ ಮಧ್ಯಾಹ್ನ 12.57 ಮತ್ತು ಸಂಜೆ 5.04ರ ಸುಮಾರಿಗೆ ಎರಡು ಬಾರಿ ಕರೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್ನ ವಕ್ತಾರರು ತಿಳಿಸಿದ್ದಾರೆ.

ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.

ಮುಕೇಶ್ ಅಂಬಾನಿಯವರ ಭದ್ರತೆಯನ್ನು ‘ಝೆಡ್‘ನಿಂದ ‘ಝೆಡ್ ಪ್ಲಸ್‘ಗೆ ಏರಿಸಿದ 5 ದಿನಗಳ ನಂತರ ಈ ಬೆದರಿಕೆ ಕರೆ ಬಂದಿದೆ. ನೀತಾ ಅಂಬಾನಿಯವರಿಗೆ ‘ವೈ ಪ್ಲಸ್‘ ಭದ್ರತೆ ಇದೆ.

ಬೆದರಿಕೆ ಬೆನ್ನಲ್ಲೇ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಅಂಬಾನಿ ಕುಟುಂಬಕ್ಕೆ ಹೆಚ್ಚುವರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಕಳೆದ 50 ದಿನಗಳಲ್ಲಿ ಎರಡನೇ ಬಾರಿಗೆ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಲಾಗಿದೆ.

ಆಗಸ್ಟ್ 15ರಂದು ಆಸ್ಪತ್ರೆಗೆ 8 ಬೆದರಿಕೆ ಕರೆಗಳು ಬಂದಿದ್ವು. ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.