ಉದ್ಯಮಿ ಮುಕೇಶ್, ನೀತಾ, ಆಕಾಶ್ ಅಂಬಾನಿಯನ್ನು ಕೊಲ್ಲುವುದಾಗಿ ಮತ್ತೆ ಬೆದರಿಕೆ ಕರೆ
ಅಂಬಾನಿ ಒಡೆತನದ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್‌ಗೆ ಬುಧವಾರ ಬೆದರಿಕೆ ಕರೆ ಬಂದಿದೆ. ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಮತ್ತು ಮುಕೇಶ್, ಪತ್ನಿ ನೀತಾ ಹಾಗೂ ಮಗ ಆಕಾಶ್ ಅಂಬಾನಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಬುಧವಾರ ಮಧ್ಯಾಹ್ನ 12.57 ಮತ್ತು ಸಂಜೆ 5.04ರ ಸುಮಾರಿಗೆ ಎರಡು ಬಾರಿ ಕರೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್‌ನ ವಕ್ತಾರರು ತಿಳಿಸಿದ್ದಾರೆ.Last Updated 6 ಅಕ್ಟೋಬರ್ 2022, 2:11 IST