ಮುಂಬೈ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ದೇಶದಾದ್ಯಂತ ಸ್ಥಿರ ದೂರವಾಣಿ ಮಾರ್ಗದ ಗರಿಷ್ಠ ವೇಗದ ಬ್ರಾಡ್ಬ್ಯಾಂಡ್ ಸೇವೆ ಒದಗಿಸಲು ಸಜ್ಜಾಗುತ್ತಿದೆ.

ಮನೆಗಳು ಮತ್ತು ಉದ್ದಿಮೆ ಸಂಸ್ಥೆಗಳಿಗೆ ಒದಗಿಸಲಿರುವ ಸ್ಥಿರ ದೂರವಾಣಿ ಮಾರ್ಗದ ಈ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯು ಟಿವಿ ಸೆಟ್ಟಾಪ್ ಬಾಕ್ಸ್ ಜತೆ ದೊರೆಯಲಿದೆ. ಇದರಿಂದ ಗೃಹ ಮನರಂಜನಾ ಉದ್ಯಮದಲ್ಲಿ ಭಾರಿ ಸಂಚಲನ ಕಂಡುಬರಲಿದೆ.

ಭಿನ್ನ ಸಂಪರ್ಕ
ಬಹುತೇಕ ಸಂದರ್ಭಗಳಲ್ಲಿ ಫೈಬರ್ ಸಂಪರ್ಕವು ಮನೆ ಅಥವಾ ಕಟ್ಟಡದವರೆಗೆ ಬರಲಿದೆ. ನಂತರದ ಸಂಪರ್ಕಕ್ಕೆ ಸಾಂಪ್ರದಾಯಿಕ ಕೇಬಲ್ ಬಳಕೆಯಾಗುತ್ತದೆ. ಇದರಿಂದ ಇಂಟರ್ನೆಟ್ ಸಂಪರ್ಕದ ವೇಗ ಕಡಿಮೆಯಾಗುತ್ತದೆ. ಸಂಪರ್ಕದ ಕೊನೆಯ ಕೊಂಡಿವರೆಗೂ ಜಿಯೊ ಗಿಗಾಫೈಬರ್ ಇರಲಿರುವುದು ಇದರ ವೈಶಿಷ್ಟವಾಗಿದೆ.

ಜಿಯೊ ಬ್ರಾಡ್ಬ್ಯಾಂಡ್ ಸೇವೆ
ರೌಟರ್, ಸೆಟ್ಟಾಪ್ ಬಾಕ್ಸ್ ಮತ್ತು ಸ್ಥಿರ ದೂರವಾಣಿ ಒಳಗೊಂಡಿರಲಿದೆ.

ಪ್ರಾಯೋಗಿಕ ಪರೀಕ್ಷೆ
ಸದ್ಯಕ್ಕೆ ಸಾವಿರಾರು ಮನೆಗಳಲ್ಲಿ ಪರೀಕ್ಷಾರ್ಥ ಬಳಕೆ ನಡೆಯುತ್ತಿದೆ.

ಆಗಸ್ಟ್ 15 –ಈ ಸೇವೆ ಪಡೆಯಲು ಗ್ರಾಹಕರು ಹೆಸರು ನೋಂದಾವಣೆ ಆರಂಭಿಸುವ ದಿನ. ಈ ಸೇವೆ ಎಂದಿನಿಂದ ಜಾರಿಗ ಬರಲಿದೆ ಎನ್ನುವುದನ್ನು ಇನ್ನೂ ಪ್ರಕಟಿಸಲಾಗಿಲ್ಲ.

1,110 –ನಗರಗಳಿಗೆ ಈ ಸೇವೆ ದೊರೆಯಲಿದೆ

ಜಿಯೊ ಗೀಗಾ ರೂಟರ್
ಅತ್ಯಂತ ಗರಿಷ್ಠ ವೇಗದ ಇಂಟರ್ನೆಟ್ ಸಂಪರ್ಕ ಮತ್ತು ಗೋಡೆಯಿಂದ ಗೋಡೆಗೆ ಗರಿಷ್ಠ ವೇಗದ ವೈಫೈ ಒದಗಿಸಲಿದೆ.

ಜಿಯೊ ಗೀಗಾ ಟಿ.ವಿ
ಇದೊಂದು ಇಂಟರ್ನೆಟ್ ಸಂಪರ್ಕ ಹೊಂದಿದ ಸೆಟ್–ಟಾಪ್ ಬಾಕ್ಸ್ ಒಳಗೊಂಡಿರಲಿದೆ.

ಜಿಯೊ ಟಿವಿ, ಜಿಯೊ ಸಿನಿಮಾ ಮತ್ತು ಜಿಯೊಸ್ಮಾರ್ಟ್ ಲಿವಿಂಗ್ನ ಸಕಲ ಸೌಲಭ್ಯಗಳು ದೊರೆಯಲಿವೆ.

600 –ಟಿ.ವಿ ಚಾನೆಲ್ಗಳ ವೀಕ್ಷಣೆ ಸಾಧ್ಯ

ಸುಸ್ಪಷ್ಟ (ಎಚ್.ಡಿ) ಕಾರ್ಯಕ್ರಮಗಳು
ಸಾವಿರಾರು ಚಲನಚಿತ್ರಗಳನ್ನು ವೀಕ್ಷಿಸುವ, ಲಕ್ಷಾಂತರ ಹಾಡುಗಳನ್ನು ಕೇಳುವ ಸೌಲಭ್ಯ

ಪರಿಣಾಮಗಳು
ಮನೆಗೆ ನೇರ ಪ್ರಸಾರ (ಡಿಟಿಎಚ್) ಮತ್ತು ಕೇಬಲ್ ವಿತರಕರಿಗೆ ತೀವ್ರ ಪೈಪೋಟಿ ಒಡ್ಡಲಿದೆ.

ಟಾಟಾ ಸ್ಕೈ, ಡಿಷ್ ಟಿವಿಗಳಿಗೆ ಸ್ಪರ್ಧೆ ಹೆಚ್ಚಲಿದೆ
ಈಗಾಗಲೇ ಕುಸಿತದ ಹಾದಿಯಲ್ಲಿ ಇರುವ, ಪ್ರತಿಯೊಬ್ಬ ಬಳಕೆದಾರನಿಂದ ಬರುವ ಸರಾಸರಿ ವರಮಾನ (ಎಆರ್ಪಿಯು– ಆರ್ಪು) ಇನ್ನಷ್ಟು ಕಡಿಮೆಯಾಗಲಿದೆ

ಜಿಯೊ ಫೋನ್2
ಎರಡನೇ ತಲೆಮಾರಿನ ಜಿಯೊ ಫೋನ್ ಪರಿಚಯಿಸಲಾಗಿದೆ. ಇದರಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಯೂಟ್ಯೂಬ್ ಸೌಲಭ್ಯಗಳಿವೆ. ಆಗಸ್ಟ್ 15 ರಿಂದ ₹ 2,999ಕ್ಕೆ ಈ ಫೋನ್ಗೆ ಬುಕಿಂಗ್ ಮಾಡಬಹುದು.

ಮನೆ ಮನೆಗೆ ಇಂಟರ್ನೆಟ್ ಸೇವೆ ಒದಗಿಸುವ ಸಂಸ್ಥೆಗಳು
ಹ್ಯಾಥ್ವೇ ಕೇಬಲ್, ಡೆನ್ ನೆಟ್ವರ್ಕ್ಸ್, ಸಿಟಿ ನೆಟ್ವರ್ಕ್ಸ್

134
ಸ್ಥಿರ ಮಾರ್ಗದ ಬ್ರಾಡ್ಬ್ಯಾಂಡ್ನ ಜಾಗತಿಕ ಶ್ರೇಯಾಂಕದಲ್ಲಿ ಭಾರತದ ಸದ್ಯದ ಸ್ಥಾನ

ಪ್ರತಿಯೊಬ್ಬರೂ ಟಿವಿ ಪರದೆ ಮೇಲೆ ಭರಪೂರ ಮನರಂಜನೆಯನ್ನು ಸುಸ್ಪಷ್ಟವಾಗಿ ವೀಕ್ಷಿಸಿ ಆನಂದಿಸಬಹುದಾಗಿದೆ. ಮನೆ, ಮನೆಯಲ್ಲಿ ಥೇಟರ್ ಹೊಂದುವ ಸೌಲಭ್ಯ ಇದಾಗಿರಲಿದೆ.
–ಆಕಾಶ್ ಅಂಬಾನಿ, ರಿಲಯನ್ಸ್ ಜಿಯೊ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.