ಮುಂಬೈ:ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹ ಶನಿವಾರ ರಾತ್ರಿ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು.

ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿ ಉದ್ಯಮಿ ಮುಕೇಶ್ ಅಂಬಾನಿಯ ಹಿರಿಯ ಪುತ್ರ ಮತ್ತು ವಜ್ರದ ವ್ಯಾಪಾರಿ ರಸೆಲ್ ಮೆಹ್ತಾ ಅವರ ಪುತ್ರಿ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಅತಿ ದೊಡ್ಡ ಕಾರ್ಪೋರೇಟ್ ಹೌಸ್ನಲ್ಲಿ ಹೊಸದಾಗಿ ನಿರ್ಮಿಸಿರುವ ಕನ್ವೆಂಷನ್ ಸೆಂಟರ್ನಲ್ಲಿ ವಿವಾಹ ಸಮಾರಂಭವನ್ನು ವಿಶಿಷ್ಟವಾಗಿ ಆಯೋಜಿಸಲಾಗಿತ್ತು. ಆಕಾಶ್ ಮತ್ತು ಶೋಕ್ಲಾ ವ್ಯಾಸಂಗ ಮಾಡಿದ, ಅಂಬಾನಿ ಕುಟುಂಬದ ಒಡೆತನದಲ್ಲಿರುವ ಶಾಲೆಯು ವಿವಾಹ ನಡೆದ ಸ್ಥಳದಿಂದ ಅನತಿ ದೂರದಲ್ಲಿದೆ.

ಆಕಾಶ್ ಮತ್ತು ಶ್ಲೋಕಾ ಅವರು ಧೀರೂಭಾಯಿ ಅಂಬಾಯಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಸಹಪಾಠಿಗಳಾಗಿದ್ದರು.

‘ಜಿಯೋ ವರ್ಲ್ಡ್ ಸೆಂಟರ್’ನಲ್ಲಿ ವಿವಾಹದ ಮೆರವಣಿಗೆಯ ಆತಿಥ್ಯ ನೀಡಲಾಗಿದೆ. ವಿವಾಹ ಸಮಾರಂಭದಲ್ಲಿ ಆಕಾಶ್ ಅವರ ತಾಯಿ ನಿತಾ, ಬಾಲಿವುಡ್ ಸ್ಟಾರ್ಗಳಾದ ಶಾರುಖ್ ಖಾನ್, ರಣಬೀರ್ ಕಪೂರ್, ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಸೇರಿದಂತೆ ಇತರರು ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.

ವಿವಾಹ ಸಮಾರಂಭಕ್ಕೆ ಗೂಗಲ್ನ ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚ್ಚೈ, ಹಿರಿಯ ಉದ್ಯಮಿಗಳಾದ ರತನ್ ಟಾಟಾ ಮತ್ತು ಎನ್.ಚಂದ್ರಶೇಖರ್ ಹಾಗೂ ಬ್ಯಾಂಕ್ ಆಫ್ ಅಮೆರಿಕ ಮತ್ತು ಸ್ಯಾಂಸಂಗ್ನ ಮುಖ್ಯ ಕಾರ್ಯನಿರ್ವಾಹಕರು ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು.

ಜೆಡಿಎಸ್ನ ವರಿಷ್ಠ ಎಚ್.ಡಿ. ದೇವೇಗೌಡ, ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಪತ್ನಿ ಚೆರಿ ಹಾಗೂ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸಹ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಿನಿಮಾ ತಾರೆಗಳಾದ ರಜನಿಕಾಂತ್, ಅಮೀರ್ ಖಾನ್, ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ ಬಚ್ಚನ್, ಕ್ರಿಕೆಟ್ ತಾರೆಗಳಾದ ಯುವರಾಜ್ ಸಿಂಗ್, ಹಾರ್ದಿಕ್ ಪಾಂಡೆ ಮತ್ತು ಪಾಂಡ್ಯೆ ಭಾಗವಹಿಸಿದ್ದರು.

ವಿವಾಹ ನೆರವೇರುವುದಕ್ಕೂ ಮೊದಲು 8.15ರ ವರೆಗೆ ವಿವಿಧ ಸಾಂಪ್ರದಾಯಿಕ ಶಾಸ್ತ್ರಗಳು ಜರುಗಿದವು. ನಂತರ ಸಮಾರಂಭವು ಮನಮೋಹಕವಾಗಿ ಅಲಂಕರಿಸಲಾಗಿದ್ದ ಸಭಾಂಗಣದಲ್ಲಿ ನಡೆಯಿತು ಎಂದು ಮೂಲಗಳು ತಿಳಿಸಿದ್ದಾಗಿ ಎನ್ಡಿ ಟಿವಿ ವರದಿ ಮಾಡಿದೆ.

ವಿವಾಹಕ್ಕೆ ವಿಶ್ವದ ವಿವಿಧ ತಿನಿಸುಗಳನ್ನು ವಿಶ್ವದರ್ಜೆಯ ಪಾಕ ತಜ್ಞರು ತಯಾರಿಸಿದ್ದರು. ಡಿಸೆಂಬರ್ನಲ್ಲಿ ನಡೆದ ಪುತ್ರಿ ಇಶಾ ಅವರ ವಿವಾಹದ ಬಳಿಕ ಅಂಬಾನಿ ಕುಟುಂಬದಲ್ಲಿ ಜರುಗಿದ ಅದ್ದೂರಿ ಸಮಾರಂಭ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.