ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ 16 ಲಕ್ಷ ಮಕ್ಕಳಿಗೆ 2023ರಲ್ಲಿ ಪ್ರಮುಖ ಲಸಿಕೆಗಳನ್ನು ಹಾಕಿಲ್ಲ: WHO ವರದಿ

Published 15 ಜುಲೈ 2024, 5:29 IST
Last Updated 15 ಜುಲೈ 2024, 5:29 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಮಕ್ಕಳ ರೋಗ ನಿರೋಧಕ ಸಾಮರ್ಥ್ಯವು ಕೋವಿಡ್‌ ಪೂರ್ವ ಸ್ಥಿತಿಗೆ ತಲುಪಿಲ್ಲ. 2023ರಲ್ಲಿ ಸುಮಾರು 16 ಲಕ್ಷ ಮಕ್ಕಳಿಗೆ ಡಿಪಿಟಿ (Diphtheria – ಗಂಟಲು ಮಾರಿ, Pertussis – ನಾಯಿಕೆಮ್ಮು, Tetanus – ಧನುರ್ವಾಯು) ಹಾಗೂ ದಡಾರ ಲಸಿಕೆಗಳನ್ನು ಹಾಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಯುನಿಸೆಫ್‌ ಸೋಮವಾರ ವರದಿ ಮಾಡಿವೆ.

ಕೇಂದ್ರ ಆರೋಗ್ಯ ಸಚಿವಾಲಯವು ಮಕ್ಕಳ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಲುವಾಗಿ ಲಸಿಕಾ ಅಭಿಯಾನಗಳನ್ನು ನಡೆಸಿದ್ದರೂ, 2023ರಲ್ಲಿ ಸಾಕಷ್ಟು ಮಕ್ಕಳಿಗೆ ಡಿಪಿಟಿ ಮತ್ತು ದಡಾರ ಲಸಿಕೆಗಳನ್ನು ಹಾಕಲು ಸಾಧ್ಯವಾಗಿಲ್ಲ. ಹೀಗಾಗಿ, 2021 ಹಾಗೂ 2022ರಲ್ಲಿ ಲಸಿಕೆಯಿಂದ ಪಡೆದಿದ್ದ ಸಾಮರ್ಥ್ಯವು ಸವಕಲಾಗಿದೆ ಎಂಬುದು ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ಡಬ್ಲ್ಯುಎಚ್‌ಒ ಹಾಗೂ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್‌ –ಯುಎನ್‌ಐಸಿಇಎಫ್) ಬಿಡುಗಡೆ ಮಾಡಿರುವ 'ಜಾಗತಿಕ ರೋಗನಿರೋಧಕ ವರದಿ'ಯಲ್ಲಿ, 2022ರಲ್ಲಿ ಸುಮಾರು 11 ಲಕ್ಷ ಮಕ್ಕಳಿಗೆ ಚುಚ್ಚುಮದ್ದು ಹಾಕಿರಲಿಲ್ಲ. ಅದರ ಪ್ರಮಾಣ 2023ರಲ್ಲಿ ಶೇ 45ರಷ್ಟು ಏರಿಕೆಯಾಗಿ 16 ಲಕ್ಷಕ್ಕೆ ತಲುಪಿದೆ' ಎಂದು ಉಲ್ಲೇಖಿಸಲಾಗಿದೆ.

'2020 ಹಾಗೂ 2021ರ ಕೋವಿಡ್‌ ಅವಧಿಯಲ್ಲಿ ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ತೊಡಕಾಗಿತ್ತು. ಆದರೆ, ಅದಾದ ಬಳಿಕ ಉತ್ತಮ ವೇಗದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದಾಗ್ಯೂ 2023ರ ಸಾಧನೆ 2019ರ ಹಿಂದಿನ ಅವಧಿಗಿಂತ ಉತ್ತಮವಾಗಿಲ್ಲ' ಎಂದು ಡಬ್ಲ್ಯುಎಚ್‌ಒ ಪ್ರಧಾನ ಕಚೇರಿಯ ಅಧಿಕಾರಿ ಜಾನ್‌ ಗ್ರೆವೆಂಡೊಂಕ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT