ಮುಂಬೈ: ರತನ್ ಟಾಟಾ ಅವರ ದೀರ್ಘಕಾಲದ ಸಹವರ್ತಿ ಶಂತನು ನಾಯ್ಡು ಅವರು, ಟಾಟಾ ಅವರನ್ನು ‘ಲೈಟ್ ಹೌಸ್’ಗೆ ಹೋಲಿಕೆ ಮಾಡಿದ್ದಾರೆ.

‘ನನ್ನಿಂದ ಸ್ನೇಹಿತ ದೂರವಾಗಿದ್ದಾನೆ. ಉಳಿದ ನನ್ನ ಜೀವನವನ್ನು ಆತನಿಲ್ಲದೇ ಬದುಕಲು ಪ್ರಯತ್ನಿಸುವೆ’ ಎಂದು ಆರ್ಎನ್ಟಿ ಕಚೇರಿಯ ಪ್ರಧಾನ ವ್ಯವಸ್ಥಾಪಕ ನಾಯ್ಡು ಅವರು, ವೃತ್ತಿಪರ ನೆಟ್ವರ್ಕಿಂಗ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.

‘ದುಃಖವು ಪ್ರೀತಿಗೆ ಪಾವತಿಸಬೇಕಾದ ಬೆಲೆಯಾಗಿದೆ. ನನ್ನ ಪ್ರೀತಿಯ ಲೈಟ್ಹೌಸ್ಗೆ ಗುಡ್ ಬೈ’ ಎಂದು ಕಿರು ಪೋಸ್ಟ್ ಮಾಡಿರುವ ನಾಯ್ಡು, ಚಾರ್ಟರ್ಡ್ ವಿಮಾನದಲ್ಲಿ ರತನ್ ಟಾಟಾ ಜೊತೆಗಿದ್ದ ಫೋಟೊವನ್ನು ಹಂಚಿಕೊಂಡಿದ್ದಾರೆ.

ರತನ್ ಟಾಟಾ ಮತ್ತು ನಾಯ್ಡು ಅವರಿಗೆ ನಾಯಿಗಳೆಂದರೆ ಪ್ರೀತಿ. ಇದು ಇಬ್ಬರ ನಡುವಿನ ಬಾಂಧವ್ಯಕ್ಕೆ ಬೆಸುಗೆ ಹಾಕಿತು. ಬಳಿಕ ಪುಣೆ ಮೂಲದ ನಾಯ್ಡು ಟಾಟಾ ಸಮೂಹದ ಕಂಪನಿಯಲ್ಲಿ ವೃತ್ತಿ ಪ್ರಾರಂಭಿಸಿದರು.

ಅಮೆರಿಕದಲ್ಲಿ ಸ್ನಾತಕೋತ್ತರ ವ್ಯಾಸಂಗ ಮುಗಿಸಿದ ಬಂದ ಬಳಿಕ ನಾಯ್ಡುಮ ಟಾಟಾ ಸನ್ಸ್ ಅಧ್ಯಕ್ಷರ ಆರ್ಎನ್ಟಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ನಾಯ್ಡು ದಿನದ ಕೆಲಸದ ಜೊತೆಗೆ ಸಾಮಾಜಿಕ ಸೇವೆಗಳನ್ನು ಆರಂಭಿಸಿದರು. ಹಿರಿಯ ನಾಗರಿಕರಿಗೆ ಒಡನಾಟ ಸೇವೆ ಒದಗಿಸಲು 2022ರಲ್ಲಿ ‘ಗುಡ್ಫೆಲ್ಲೋಸ್’ ಆರಂಭಿಸಿದ್ದ ಅವರ ಹೆಗ್ಗಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.