ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ಛತ್ತೀಸಗಢ ಸಿಎಂಗೆ ₹508 ಕೋಟಿ ಪಾವತಿ: ಇಡಿ ಆರೋಪ.ಬೆಟ್ಟಿಂಗ್ ಆ್ಯಪ್ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್.
ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ಕೋರಿಕೆ ಮೇರೆಗೆ ಮಹಾದೇವ್ ಆ್ಯಪ್ ಹಾಗೂ ರೆಡ್ಡಿಅನ್ನಪ್ರೆಸ್ಟ್ಪ್ರೊ ಸಹಿತ ಚಾಲ್ತಿಯಲ್ಲಿರುವ 22 ಅಕ್ರಮ ಬೆಟ್ಟಿಂಗ್ ತಾಣಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.

‘ತಮಗೆ ಅಧಿಕಾರ ಇದ್ದರೂ, ಇಂಥ ಅಕ್ರಮ ಎಸಗುವ ಆ್ಯಪ್ಗಳನ್ನು ನಿಷೇಧಿಸಲು ಯಾವುದೇ ಕೋರಿಕೆಯನ್ನು ಛತ್ತೀಸಗಢ ಸರ್ಕಾರದ ಸಲ್ಲಿಸಿಲ್ಲ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ರಾಜ್ಯ ಸರ್ಕಾರವನ್ನು ಆರೋಪಿಸಿ ಅದರ ವಿರುದ್ಧ ಹರಿಹಾಯ್ದಿದ್ದಾರೆ.

ಛತ್ತೀಸಗಢ ಮೂಲದ ಮಹಾದೇವ ಆನ್ಲೈನ್ ಬೆಟ್ಟಿಂಗ್ ಆ್ಯಪ್ ವಿರುದ್ಧ ಕೆಲ ತಿಂಗಳ ಹಿಂದೆ ಜಾರಿ ನಿರ್ದೇಶನಾಲಯವು ತನಿಖೆ ಕೈಗೊಂಡಿತ್ತು. ಈ ಸಂಬಂಧ ಬಾಲಿವುಡ್ನ ಹಲವು ನಟ, ನಟಿಯರನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಇತರ ತಾಣಗಳನ್ನು ನಿರ್ಬಂಧಿಸುವಂತೆ ಜಾರಿ ನಿರ್ದೇಶನಾಲಯ ಕೇಂದ್ರವನ್ನು ಕೋರಿತ್ತು.

’ಐಟಿ ಕಾಯ್ದೆ 69ಎ ಅಡಿಯಲ್ಲಿ ಅಕ್ರಮ ಎಸಗುವ ಮೊಬೈಲ್ ಆ್ಯಪ್ ಹಾಗೂ ಅಂತರ್ಜಾಲ ತಾಣಗಳನ್ನು ನಿರ್ಬಂಧಿಸಲು ಅಥವಾ ನಿಷೇಧಕ್ಕೆ ಶಿಫಾರಸು ಮಾಡಲು ಛತ್ತೀಸಗಢ ಸರ್ಕಾರಕ್ಕೆ ಎಲ್ಲಾ ರೀತಿಯ ಅಧಿಕಾರವೂ ಇದೆ. ಈ ಪ್ರಕರಣವನ್ನು ಛತ್ತೀಸಗಢ ಸರ್ಕಾರ ಅನಗತ್ಯವಾಗಿ ಒಂದೂವರೆ ವರ್ಷ ಎಳೆದಿದೆ. ಆದರೂ ಇಂಥ ತಾಣಗಳ ಮೇಲೆ ನಿರ್ಬಂಧ ಹೇರುವ ಯಾವುದೇ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಈ ವಿಷಯದಲ್ಲಿ ಮೊದಲ ಹಾಗೂ ಏಕೈಕ ಕೋರಿಕೆ ಬಂದಿದ್ದು ಜಾರಿ ನಿರ್ದೇಶನಾಲಯದಿಂದ ಮಾತ್ರ’ ಎಂದು ರಾಜೀವ ಚಂದ್ರಶೇಖರ್ ಹೇಳಿದ್ದಾರೆ.

ಛತ್ತೀಸಗಢ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಅಗಿದ್ದ ಭೀಮ್ ಸಿಂಗ್ ಯಾದವ್ ಹಾಗೂ ಅಸೀಮ್ ದಾಸ್ ಎಂಬುವವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.
.ಒಳನೋಟ | ಬೆಟ್ಟಿಂಗ್ ಭೂತದ ತಾಂಡವ: ವೈಭವೊಪೇತ ಐಪಿಎಲ್ ಕ್ರಿಕೆಟ್ನ ಮತ್ತೊಂದು ಮುಖ.ಬೆಟ್ಟಿಂಗ್ ಆ್ಯಪ್ ಮೂಲಕ ಹಣ ವರ್ಗಾವಣೆ: ನಟ ರಣಬೀರ್ ಕಪೂರ್ಗೆ ಇಡಿ ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.