ನವದೆಹಲಿ: ಪಾಕಿಸ್ತಾನ ಮೂಲದ ಒಟಿಟಿ Vidly TVಯ ವೆಬ್‌ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರವು ಸೋಮವಾರ ಆದೇಶಿಸಿದೆ.

ಒಟಿಟಿಯಲ್ಲಿ ತೋರಿಸುತ್ತಿರುವ ವೆಬ್ ಸರಣಿಯು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯುಂಟು ಮಾಡಿದೆ ಎಂದು ಸರ್ಕಾರ ಹೇಳಿದೆ.

26/11ರ ಮುಂಬೈ ದಾಳಿಯ ದಿನದಂದು ಒಟಿಟಿ ವೇದಿಕೆ ‘Vidly TV’ಯು ‘ಸೇವಕ್: ದಿ ಕನ್ಫೆಷನ್ಸ್’ ಎಂಬ ವೆಬ್ ಸರಣಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ವೆಬ್ ಸರಣಿಯ ಮೂರು ಸಂಚಿಕೆಗಳು ಇಲ್ಲಿಯವರೆಗೆ ಬಿಡುಗಡೆಯಾಗಿವೆ ಎಂದು ಅದು ಹೇಳಿದೆ.
ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿಯುಳ್ಳ ವೆಬ್-ಸರಣಿ ‘ಸೇವಕ್‘ ಅನ್ನು ಪಾಕಿಸ್ತಾನದ 'ಇನ್ಫೋ ಆಪ್ಸ್' ಪ್ರಾಯೋಜಿಸಿದೆ. ಇದರ ಮೌಲ್ಯಮಾಪನದ ನಂತರ Vidly TVಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಐತಿಹಾಸಿಕ ಸೂಕ್ಷ್ಮ ಘಟನೆಗಳು ಮತ್ತು ರಾಷ್ಟ್ರೀಯ ಘನತೆಗೆ ಸಂಬಂಧಿಸಿದ ‘ಆಪರೇಷನ್ ಬ್ಲೂ ಸ್ಟಾರ್’ ಮತ್ತು ಅದರ ನಂತರದ ಘಟನೆಗಳು, ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ, ‘ಗ್ರಹಾಂ ಸ್ಟೇನ್ಸ್’ ಎಂಬ ಕ್ರೈಸ್ತ ಮಿಷನರಿಯ ಹತ್ಯೆ, ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್, ಸಟ್ಲೆಜ್–ಯಮುನಾ ಕಾಲುವೆಗೆ ಸಂಬಂಧಿಸಿದ ಅಂತರ-ರಾಜ್ಯ ನದಿ ನೀರಿನ ವಿವಾದಗಳ ಬಗ್ಗೆ ಭಾರತ ವಿರೋಧಿ ನಿರೂಪಣೆಯನ್ನು ವೆಬ್-ಸರಣಿಯಲ್ಲಿ ಚಿತ್ರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.