ಕೆವಾಡಿಯಾ, (ಗುಜರಾತ್): ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸಲು ಅಂಗನವಾಡಿ ಕೇಂದ್ರಗಳಿಂದ ಪಡೆಯುವ ಪಡಿತರದ ಜೊತೆಗೆ ಆಯುಷ್ ಉತ್ಪನ್ನಗಳನ್ನು ವಿತರಿಸುವ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗಿದ್ದು, ಎರಡೂ ರಾಜ್ಯಗಳು ಉತ್ತಮ ಫಲಿತಾಂಶ ನೀಡಿವೆ. ಇದನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಆಯುಷ್ ಇಲಾಖೆಯ ಕಾರ್ಯದರ್ಶಿ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ಗುಜರಾತ್‌ನಲ್ಲಿ, ಮಕ್ಕಳಿಗಾಗಿ ಬಾಲಶಕ್ತಿ ಯೋಜನೆಯಡಿ ತ್ರಿಕಾಟು ಮತ್ತು ವಿದಂಗ್‌ನಂತಹ ಹಲವಾರು ಆಯುರ್ವೇದ ಉತ್ಪನ್ನಗಳನ್ನು ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾತೃಶಕ್ತಿ ಯೋಜನೆಯಡಿಯಲ್ಲಿ ಜೀರಾ ಮತ್ತು ಮುಸ್ತಾ ಚುರ್ನ್ ಅನ್ನು ನೀಡಲಾಗುತ್ತಿದೆ’ ಎಂದು ಐಸಿಡಿಎಸ್‌ನ ಜಂಟಿ ನಿರ್ದೇಶಕಿ ಆವಂತಿಕಾ ದರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.