ಭುಜ್: ಭಾರಿ ಮಳೆಯಿಂದ ಜರ್ಜರಿತವಾಗಿರುವ ಗುಜರಾತ್‌ನ ಕಚ್ ಜಿಲ್ಲೆಯ ಲಖ್‌ಪತ್ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 3ರಿಂದ 8ರ ನಡುವೆ 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ 12 ಜನ ಮೃತಪಟ್ಟಿದ್ದಾರೆ.

ಪ್ರಾಥಮಿಕ ಮೂಲಗಳ ಪ್ರಕಾರ ನ್ಯುಮೋನಿಟಿಸ್‌ನಿಂದ ಸಾವು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ್ವರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಉಸಿರಾಟದ ತೊಂದರೆ ಕೂಡ ಉಂಟಾಗಿದೆ ಎಂದು ಕೆಲವು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರು ಹೇಳಿದ್ದಾರೆ.

ಸದ್ಯ ಲಖ್‌ಪತ್ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆ 22 ತಂಡಗಳು ಕಾರ್ಯನಿರ್ವಹಿಸುತ್ತಿವೆ. ವೈದ್ಯರ ನಿಯೋಜನೆಯೊಂದಿಗೆ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ರಾಜ್‌ಕೋಟ್ ಪಿಡಿಯು ವೈದ್ಯಕೀಯ ಕಾಲೇಜಿನ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಕಚ್ ಜಿಲ್ಲಾಧಿಕಾರಿ ಅಮಿತ್ ಅರೋರಾ ಹೇಳಿದ್ದಾರೆ.

ಎಚ್1ಎನ್1, ಹಂದಿಜ್ವರ, ಮಲೇರಿಯಾ ಮತ್ತು ಡೆಂಗಿ ಸಾಧ್ಯತೆ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಂದ ರಕ್ತದ ಮಾದರಿಗಳನ್ನು ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕವಾಗಿ, ಈ ಸಾವುಗಳು ನ್ಯುಮೋನಿಟಿಸ್‌ನಿಂದ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಇದು ಸಾಂಕ್ರಾಮಿಕ ರೋಗದಂತೆ ಕಾಣುತಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಈ ಬಗ್ಗೆ ಕಚ್ ಜಿಲ್ಲಾ ಪಂಚಾಯತ್ ಸದಸ್ಯರಾದ ಮೀನಾಬಾ ಜಡೇಜಾ ಅವರು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿಸಿಂಗ್ ಗೋಹಿಲ್ ಅವರಿಗೆ ಪತ್ರ ಬರೆದಿದ್ದಾರೆ. ಲಖ್‌ಪತ್ ತಾಲ್ಲೂಕಿನ ಬೇಖಾಡಾ , ಸನಾಂದ್ರೋ, ಮೋರ್ಗರ್ ಮತ್ತು ಭಾರವಂಧ್ ಗ್ರಾಮಗಳಲ್ಲಿ ಜ್ವರದಿಂದ ಸೆಪ್ಟೆಂಬರ್ 3 ಮತ್ತು 8ರ ನಡುವೆ 5-50 ವಯಸ್ಸಿನ 12 ಜನ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ರೋಗಿಗಳಿಗೆ ಜ್ವರ , ನೆಗಡಿ, ಕೆಮ್ಮು, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆ ಇದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.