ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಗುಜರಾತ್ ವಿಧಾನಸಭೆ ಚುನಾವಣೆಗೆ ಇಂದು (ಗುರುವಾರ) ವೇಳಾಪಟ್ಟಿ ಪ್ರಕಟಿಸಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 01 ಮತ್ತು ಡಿಸೆಂಬರ್ 05ರಂದು ಮತದಾನ ನಡೆಯಲಿದೆ.ಮೊದಲ ಹಂತದಲ್ಲಿ 89 ಮತ್ತು ಎರಡನೇ ಹಂತದಲ್ಲಿ 93 ಸ್ಥಾನಗಳಿಗೆಚುನಾವಣೆ ನಡೆಯಲಿದೆ. ಬಳಿಕ ಡಿಸೆಂಬರ್ 8ರಂದು ಮತ ಎಣಿಕೆ ನಡೆದುಫಲಿತಾಂಶ ಪ್ರಕಟಗೊಳ್ಳಲಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಮೊದಲು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿ, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಗುಜರಾತ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಪ್ರಕಟಿಸದೇ ಇರುವುದರ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ಗುಜರಾತ್ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ:

ಅಧಿಸೂಚನೆ:
ಮೊದಲ ಹಂತ: ನವೆಂಬರ್ 5
ಎರಡನೇ ಹಂತ: ನವೆಂಬರ್ 10

ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕ:
ಮೊದಲ ಹಂತ: ನವೆಂಬರ್ 14
ಎರಡನೇ ಹಂತ: ನವೆಂಬರ್ 17

ನಾಮಪತ್ರ ಪರಿಶೀಲನೆ:
ಮೊದಲ ಹಂತ: ನವೆಂಬರ್ 15
ಎರಡನೇ ಹಂತ: ನವೆಂಬರ್ 18

ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ:
ಮೊದಲ ಹಂತ: ನವೆಂಬರ್ 17
ಎರಡನೇ ಹಂತ: ನವೆಂಬರ್ 21

ಚುನಾವಣೆ:
ಮೊದಲ ಹಂತ: ಡಿಸೆಂಬರ್ 1 (ಗುರುವಾರ)
ಎರಡನೇ ಹಂತ: ಡಿಸೆಂಬರ್ 5 (ಸೋಮವಾರ)

ಮತ ಎಣಿಕೆ (ಫಲಿತಾಂಶ):ಡಿಸೆಂಬರ್ 8 (ಗುರುವಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.