ಗಾಂಧಿನಗರ: ಭಾರತದ ಹಲವು ಪ್ರಮುಖ ಉದ್ಯಮಿಗಳು ಹಾಗೂ ‘ಶ್ರೀಮಂತರ ತವರು’ ಎಂದೇ ಖ್ಯಾತವಾಗಿರುವ ಗುಜರಾತ್ನಲ್ಲಿ, ಏಷ್ಯಾದ ಶ್ರೀಮಂತ ಹಳ್ಳಿ ಇದೆ. ಹೌದು, ಕಚ್ ಸಮೀಪದ ‘ಮಧಾಪುರ’ ಗ್ರಾಮವು ಏಷ್ಯಾದ ಶ್ರೀಮಂತ ಹಳ್ಳಿ ಎಂಬ ಹಿರಿಮೆಗೆ ಪಾತ್ರವಾಗಿದೆ.

ಪಟೇಲ್ ಸಮುದಾಯದವರೇ ಹೆಚ್ಚಿರುವ ಈ ಗ್ರಾಮದಲ್ಲಿ 2011ರಲ್ಲಿ 17 ಸಾವಿರ ಜನಸಂಖ್ಯೆ ಇತ್ತು. ಇದೀಗ 32 ಸಾವಿರ ಜನರು ವಾಸವಿದ್ದಾರೆ.

ಇಲ್ಲಿನ ಬಹುತೇಕ ಕುಟುಂಬಗಳು ವಿದೇಶದಲ್ಲಿ ನೆಲಸಿದ್ದು, ಅನಿವಾಸಿ ಭಾರತೀಯರಾಗಿದ್ದಾರೆ. ಗ್ರಾಮದಲ್ಲಿ 20 ಸಾವಿರ ಮನೆಗಳಿದ್ದು, 1,200ಕ್ಕೂ ಅಧಿಕ ಕುಟುಂಬಗಳು ವಿದೇಶದಲ್ಲಿ ವಾಸವಾಗಿದ್ದಾರೆ. ಇದರಲ್ಲಿ ಬಹುಪಾಲು ಕುಟುಂಬಗಳು ಆಫ್ರಿಕಾ ಖಂಡದಲ್ಲಿ ವಾಸವಿದ್ದಾರೆ. ಆಫ್ರಿಕಾದ ಮಧ್ಯಭಾಗದಲ್ಲಿರುವ ದೇಶಗಳಲ್ಲಿ, ಕಟ್ಟಡ ನಿರ್ಮಾಣ ಉದ್ಯಮದ ಮೇಲೆ ಇಲ್ಲಿನ ಜನರು ಹಿಡಿತ ಸಾಧಿಸಿದ್ದಾರೆ.

ಅಮೆರಿಕ, ಯುಕೆ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ನಲ್ಲೂ ಈ ಗ್ರಾಮದ ಮೂಲದವರು ವಾಸವಿದ್ದಾರೆ.

ಈ ಗ್ರಾಮದಲ್ಲಿ ಹೆಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ, ಪಿಎನ್ಬಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಸೇರಿದಂತೆ ಖಾಸಗಿ ಹಾಗೂ ಸರ್ಕಾರಿ ಸೌಮ್ಯದ 17 ಬ್ಯಾಂಕ್ಗಳಿವೆ. ಇಲ್ಲಿನ ಜನರು ಈ ಬ್ಯಾಂಕ್ಗಳಲ್ಲಿ ₹7 ಸಾವಿರ ಕೋಟಿ ಠೇವಣಿ ಇಟ್ಟಿದ್ದಾರೆ.

‘ಬೇರೆ ದೇಶಗಳಲ್ಲಿ ವಾಸವಿದ್ದರೂ, ಇಲ್ಲಿನ ಜನರು ಇಲ್ಲೇ ಠೇವಣಿ ಇಡಲು ಬಯಸುತ್ತಾರೆ’ ಎನ್ನುತ್ತಾರೆ ಇಲ್ಲಿನ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪರುಲಬೆನ್ ಕಾರಾ.

ಈ ದೊಡ್ಡ ಮೊತ್ತದ ಠೇವಣಿಯಿಂದಲೇ ಗ್ರಾಮ ಶ್ರೀಮಂತವಾಗಿದೆ. ಗ್ರಾಮದಲ್ಲಿ ನೀರು, ರಸ್ತೆ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳಿದೆ. ಜತೆಗೆ ದೊಡ್ಡ ದೊಡ್ಡ ಬಂಗಲೆಗಳು, ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೆರೆ, ದೇವಸ್ಥಾನ ಹೀಗೆ ಜನರ ದೈನಂದಿನ ಜೀವನಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಈ ಗ್ರಾಮ ಹೊಂದಿದೆ ಎಂದು ಸ್ಥಳೀಯ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರೊಬ್ಬರು ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.