ಜೈಪುರ:ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮಹಿಳಾ ಏಜೆಂಟ್ಗೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದ ಇಬ್ಬರು ಯೋಧರನ್ನು ಬುಧವಾರ ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಇಬ್ಬರೂ ಫೋಖ್ರಾನ್ನಿಂದ ತಮ್ಮ ಹಳ್ಳಿಗೆ ತೆರಳುತ್ತಿದ್ದ ವೇಳೆ ಜೋಧ್ಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.ಹನಿಟ್ರ್ಯಾಪ್ಗೆ ಒಳಗಾಗಿದ್ದ ಇಬ್ಬರೂ ಯೋಧರು ಪಾಕಿಸ್ತಾನದ ಮಹಿಳೆಗೆ ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ಜೈಪುರಕ್ಕೆ ಕರೆದೊಯ್ಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಯೋಧರುಹನಿಟ್ರ್ಯಾಪ್ಗೆ ಒಳಗಾಗಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ.

ಮಹಿಳೆಯು ‘ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (ವಿವೊಐಪಿ)’ ಸೇವೆ ಬಳಸಿಕೊಂಡು ಪಾಕಸ್ತಾನದ ದೂರವಾಣಿ ಸಂಖ್ಯೆಯಿಂದ ಯೋಧರಿಗೆ ಕರೆ ಮಾಡುತ್ತಿದ್ದಳು. ಯೋಧರ ಮೊಬೈಲ್ ಸ್ಕ್ರೀನ್ಗಳಲ್ಲಿ ಅದು ಭಾರತದ ಸಂಖ್ಯೆಯಂತೆಯೇ ಗೋಚರಿಸುತ್ತಿತ್ತು. ಹೀಗಾಗಿ ಆಕೆಯನ್ನು ಭಾರತೀಯಳೆಂದೇ ಭಾವಿಸಿ ಮಾಹಿತಿ ಹಂಚಿಕೊಂಡಿದ್ದರು.

ಸೇನಾ ಸಲಕರಣೆಗಳ ವಿವರ, ರಾಜಸ್ಥಾನದಲ್ಲಿ ಸೇನಾ ನಿಯೋಜನೆ ಸೇರಿದಂತೆ ಅನೇಕ ರಹಸ್ಯ ಮಾಹಿತಿಗಳನ್ನು ಯೋಧರು ಐಎಸ್ಐ ಏಜೆಂಟ್ಗೆ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.