ನವದೆಹಲಿ(ಪಿಟಿಐ): ‘ಹ್ಯೂಸ್ಟನ್ನಲ್ಲಿ ನಡೆಯಲಿರುವ ‘ಹೌಡಿಮೋದಿ’ ಕಾರ್ಯಕ್ರಮಕ್ಕೂ ಮೊದಲು ದೇಶವನ್ನುಆರ್ಥಿಕ ಹಿಂಜರಿತದ ಬಿಕ್ಕಟ್ಟಿನಿಂದ ಹೊರತರಲು ಪ್ರಧಾನಿ ನರೇಂದ್ರ ಮೋದಿ ಏನೇನು ಕ್ರಮ ತೆಗೆದುಕೊಳ್ಳುತ್ತಾರೋ ಎಂಬುದನ್ನು ನಾನು ಅಚ್ಚರಿಯಿಂದ ನಿರೀಕ್ಷಿಸುತ್ತಿದ್ದೇ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೌಡಿಮೋದಿ ಜಗತ್ತಿನ ಅತಿ ದುಬಾರಿ ಕಾರ್ಯಕ್ರಮ ಎಂದು ಕಿಡಿ ಕಾರಿದ್ಧಾರೆ.

‘₹1.4 ಲಕ್ಷ ಕೋಟಿ ವೆಚ್ಚದಲ್ಲಿ ಹೌಡಿಮೋದಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು, ಇದು ವಿಶ್ವದಲ್ಲೇ ಅತಿ ಅದ್ಧೂರಿಯಾಗಿ ನಡೆಸುತ್ತಿರುವ ಕಾರ್ಯಕ್ರಮವಾಗಿದೆ. ದೇಶದಲ್ಲಿ ದುರ್ಬಲವಾಗಿರುವ ಆರ್ಥಿಕ ಸ್ಥಿತಿ ಮುಚ್ಚಿಡಲು ಯಾವ ಕಾರ್ಯಕ್ರಮದಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ದೇಶಿಯ ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಕಡಿತ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಿಗೇ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.