ಅಂಬೇಡ್ಕರ್ ನಗರ: ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸಮಾಜವಾದಿ ಪಕ್ಷ, ಬಿಎಸ್‌ಪಿ ಅಥವಾ ಕಾಂಗ್ರೆಸ್ಆಗಿರಲಿ ಅವರ ನಿಜ ಸಂಗತಿ ಏನೆಂದು ಅರ್ಥ ಮಾಡಿಕೊಳ್ಳಬೇಕು. ಬೆಹನ್‍ಜೀ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಬಳಸಿದರು. ಆದರೆ ಆಕೆ ಮಾಡಿದ್ದೆಲ್ಲಾ ಅಂಬೇಡ್ಕರ್ ಅವರ ನಿಲುವಿನ ವಿರುದ್ಧವಾಗಿತ್ತು. ಎಸ್‌ಪಿ ಲೋಹಿಯಾ ಅವರ ಹೆಸರನ್ನು ಬಳಿಸಿ ಉತ್ತರ ಪ್ರದೇಶದಲ್ಲಿ ಕಾನೂನು ಕಟ್ಟಳೆಗಳನ್ನು ನಾಶ ಮಾಡಿತ್ತು ಎಂದಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು
* ಯಾವೊಬ್ಬ ಬಡವನೂ ತನ್ನ ಮಕ್ಕಳನ್ನು ಬಡವರಾಗಿ ಕಾಣಲು ಇಚ್ಛಿಸುವುದಿಲ್ಲ. ಚಹಾ ಮಾರುವವನು ತನ್ನ ಮಗ ಚಹಾ ಮಾರಬೇಕೆಂದು ಬಯಸುವುದಿಲ್ಲ. ತಳ್ಳುಗಾಡಿಯವನು ಅವನ ಮಗ ಹಾಗೇ ಆಗಬೇಕೆಂದು ಬಯಸುವುದಿಲ್ಲ.ತರಕಾರಿ ಮಾರುವವನು ತನ್ನ ಮಗ ದೊಡ್ಡವನಾಗಿ ತರಕಾರಿ ಮಾರಬೇಕೆಂದು ಬಯಸುವುದಿಲ್ಲ. ಬಡವರು ಮುಂದೆ ಬರಬೇಕು, ಕಾರ್ಮಿಕರು ಅಭಿವೃದ್ಧಿ ಹೊಂದಬೇಕು,ಅವರಿಗೆ ನೆರವಿನ ಅಗತ್ಯವಿದೆ.

* ಜನರು ಔಷಧಿಗಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ.ಅದಕ್ಕಾಗಿಯೇ ನಾವು ಆಯುಷ್‌ಮಾನ್ ಭಾರತ್ ಯೋಜನೆ ಆರಂಭಿಸಿದೆವು.

* ಬಡವರ ಬಗ್ಗೆ ನನಗೆ ಮರುಕ ಇದೆ. ನನಗೆ ಅವರ ಬದುಕು ಗೊತ್ತು, ಹಾಗಾಗಿಯೇ ನಾನು ಅವರಿಗಾಗಿ ಕೆಲಸ ಮಾಡುತ್ತೇನೆ.

* ನೀವು ಎಷ್ಟೊಂದು ಪ್ರೀತಿ ತೋರಿಸುತ್ತಿದ್ದೀರಿ. ಅಲ್ಲಿ ಬಿಎಸ್‌ಪಿಯ ಬಿಪಿ ಏರುತ್ತದೆ.

* ನಮ್ಮ ಸರ್ಕಾರ ಅನುಕಂಪ ಹೊಂದಿದೆ. ಈ ಹಿಂದೆ ಯಾರೊಬ್ಬರೂ ಅಂಚೆಯವನ(ಪೋಸ್ಟ್‌ಮ್ಯಾನ್)ಬಗ್ಗೆ ಯೋಚಿಸಿಲ್ಲ.ಈಗ ಅವರ ಸಂಬಳ ಏರಿಕೆ ಆಗಿದೆ. ಹಿಂದಿನ ಸರ್ಕಾರ ₹50 ಅಥವಾ ₹60 ಪಿಂಚಣಿ ನೀಡುತ್ತಿತ್ತು. ಅದನ್ನು ಪಡೆಯುವುದಕ್ಕಾಗಿ ಅತ್ತಿತ್ತ ಓಡಾಡುವ ಖರ್ಚೇ ಜಾಸ್ತಿ ಆಗಿತ್ತು.

* ನಾವು ನಮ್ಮ ಪರಂಪರೆಯನ್ನು ಪ್ರವಾಸೋದ್ಯಮದ ಜತೆ ಬೆಸೆದೆವು. ಪರಂಪರೆ ವಿಶ್ವಾಸ ಮತ್ತು ಸಂಸ್ಕೃತಿಗೆ ಮಾತ್ರ ಸೀಮಿತವಾಗದಿರದಂತೆ ನೋಡಿಕೊಂಡೆವು. ಈ ಮೂಲಕ ಆರ್ಥಿಕ ಲಾಭ ಬರುವಂತೆ ಮಾಡಿದೆವು.ಆದರೆ ಭಯೋತ್ಪಾದನೆ ನಂಬಿಕೆ ಮತ್ತು ಪ್ರವಾಸಕ್ಕೆ ದೊಡ್ಡ ಬೆದರಿಕೆ.

* ನಮ್ಮ ನೆರೆ ರಾಷ್ಟ್ರಗಳು ಭಯೋತ್ಪಾದನೆ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಪೋಷಿಸುತ್ತವೆ.ಭಯೋತ್ಪಾದನೆಯನ್ನು ಎದುರಿಸಲು ತಾಕತ್ತು ಇರುವ ಸರ್ಕಾರ ಅಧಿಕಾರಕ್ಕೇರುವಂತೆ ಮಾಡುವುದು ಅತ್ಯಗತ್ಯ.

* ಬಿಹಾರದಲ್ಲಿರುವ ಮಹಾಮೈತ್ರಿ ನಕಲಿ ಮೈತ್ರಿ ಎಂದ ಮೋದಿ,ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ಹಣದಿಂದ ನಿರ್ಮಾಣಗೊಂಡ ಶಾಪಿಂಗ್ ಮಾಲ್‌ಗಳನ್ನು ನಾವು ಕೆಡವುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.