ನವದೆಹಲಿ: ಅಸ್ಸಾಂನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾದತ್ತ ಹೊರಟಿದ್ದ ಭಾರತೀಯ ವಾಯುಪಡೆಯ AN-32 ವಿಮಾನ ಸೋಮವಾರ ನಾಪತ್ತೆಯಾಗಿದೆ.

ಮಧ್ಯಾಹ್ನ 12.25ಕ್ಕೆ ಜೋರ್ಹಾಟ್ ವಾಯುನೆಲೆಯಿಂದ ಹೊರಟಿದ್ದ ವಿಮಾನ 1 ಗಂಟೆಯ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತ್ತು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ವಿಮಾನದಲ್ಲಿ ಭಾರತೀಯ ವಾಯಸೇನೆಯ 13 ಮಂದಿ ಇದ್ದರು.

ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಮಾನ ನಾಪತ್ತೆಯಾಗಿರುವ ಸಂಗತಿ ಬಗ್ಗೆ ಟ್ವೀಟ್ ಮಾಡಿದ್ದು ವಿಮಾನದ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.

ವಿಮಾನ ಎಲ್ಲಿ ನಾಪತ್ತೆಯಾಗಿದೆ ಎಂಬುದರ ಬಗ್ಗೆ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ರಕ್ಷಣಾ ಸಚಿವಾಲಯದ ಲೆಫ್ಟನೆಂಟ್ ಕರ್ನಲ್ ಪಿ. ಖೊಂಗಸೈ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.