ವಯನಾಡ್: ಶಬರಿಮಲೆಯು ವಕ್ಫ್ಗೆ ಸೇರಿದ್ದು ಎಂದು ವಾವರ್ ಸ್ವಾಮಿ ಪ್ರತಿಪಾದಿಸಿದರೆ, ಅಯ್ಯಪ್ಪ ಸ್ವಾಮಿ ಆ ಪವಿತ್ರ ಬೆಟ್ಟದಿಂದ ಬಲವಂತವಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ. ಗೋಪಾಲಕೃಷ್ಣನ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸ್ಥಳೀಯ ನಂಬಿಕೆಗಳ ಪ್ರಕಾರ ವಾವರ್ ಸ್ವಾಮಿಯು ಅಯ್ಯಪ್ಪ ಸ್ವಾಮಿಯ ಮುಸ್ಲಿಂ ಜೊತೆಗಾರ. ಶಬರಿಮಲೆಯಲ್ಲಿ ವಾವರ್ ಸ್ವಾಮಿಗೆ ಸೇರಿದ ಸ್ಥಳವೊಂದು ಇದೆ.

ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಅವರ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಗೋಪಾಲಕೃಷ್ಣನ್ ಅವರು, ವಕ್ಫ್ (ತಿದ್ದುಪಡಿ) ಮಸೂದೆ – 2024ಕ್ಕೆ ಸಂಬಂಧಿಸಿದ ವಿವಾದಗಳ ಬಗ್ಗೆ ಪ್ರಸ್ತಾಪಿಸಿದರು.

ಶಬರಿಮಲೆಯು ಅಯ್ಯಪ್ಪ ಸ್ವಾಮಿಯ ಜಾಗ. ಅದನ್ನು ಮುಂದೊಂದು ದಿನ ವಕ್ಫ್ ಆಸ್ತಿ ಎನ್ನಬಹುದೇ ಎಂದು ಪ್ರಶ್ನಿಸಿದರು. ‘ಅಯ್ಯಪ್ಪ ಸ್ವಾಮಿಯ ಕೆಳಗೆ ಒಬ್ಬ ಇದ್ದಾನೆ. ಪವಿತ್ರವಾದ 18 ಮೆಟ್ಟಿಲುಗಳ ಕೆಳಗೆ... ವಾವರ್... ಈ ವಾವರ್ ತಾನು ಜಾಗವನ್ನು ವಕ್ಫ್ಗೆ ನೀಡಿದ್ದೇನೆ ಎಂದು ನಾಳೆ ಹೇಳಿದರೆ ಶಬರಿಮಲೆಯು ವಕ್ಫ್ಗೆ ಹೋಗುತ್ತದೆ. ಆಗ ಅಯ್ಯಪ್ಪ ಸ್ವಾಮಿಯು ಶಬರಿಮಲೆಯನ್ನು ಬಲವಂತದಿಂದ ತೊರೆಯಬೇಕಾಗುತ್ತದೆ... ಇದಕ್ಕೆ ನಾವು ಅವಕಾಶ ಮಾಡಿಕೊಡಬೇಕೇ’ ಎಂದು ಪ್ರಶ್ನಿಸಿದರು.

ವಯನಾಡ್ನ ಕ್ರೈಸ್ತ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಗೋಪಾಲಕೃಷ್ಣನ್ ಅವರು, ‘ತಮಿಳುನಾಡಿನಲ್ಲಿ ವೆಲಂಕಣ್ಣಿಯು ಕ್ರೈಸ್ತರಿಗೆ ಪ್ರಮುಖವಾದ ಯಾತ್ರಾಸ್ಥಳ. ಅದನ್ನು ವಕ್ಫ್ಗೆ ಸೇರಿದ್ದು ಎಂದು ಯಾರಾದರೂ ಹೇಳಿದರೆ, ಹಾಗಾಗುವುದಕ್ಕೆ ಅವಕಾಶ ಕೊಡಬೇಕೇ’ ಎಂದೂ ಪ್ರಶ್ನಿಸಿದರು. ಇಂಥದ್ದನ್ನು ತಡೆಯುವ ಉದ್ದೇಶದಿಂದ ತಿದ್ದುಪಡಿಯನ್ನು ತರಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.