ನವದೆಹಲಿ/ಚೆನ್ನೈ: ಚೆನ್ನೈನ ಹಳೆಯ ಸೇಂಟ್ ಜಾರ್ಜ್ ಕೋಟೆಯಲ್ಲಿ 1947ರ ಆಗಸ್ಟ್ 15ರಂದು ಹಾರಿಸಲಾದ ಭಾರತದ ಧ್ವಜವನ್ನು ಇರಿಸಲಾಗಿದೆ.

‘ಅಪ್ಪಟ ರೇಷ್ಮೆಯಲ್ಲಿ ತಯಾರಿಸಲಾದ ಈ ಧ್ವಜ 3.5 ಮೀಟರ್ ಉದ್ದವಿದ್ದು, 2.4 ಮೀಟರ್ ಅಗಲವಿದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 1947ರ ಆಗಸ್ಟ್ 15ರ ಬೆಳಗಿನ ಜಾವ 5.30ಕ್ಕೆ ಹಾರಿಸಿದ ಮೊದಲ ಧ್ವಜಗಳಲ್ಲಿ ಒಂದು’ ಎಂದು ಸಂಸ್ಕೃತಿ ಸಚಿವಾಲಯ ಹೇಳಿದೆ.

‘ಈ ಧ್ವಜವು ಸ್ವಾತಂತ್ರ್ಯವನ್ನು ಸಾಧಿಸಲು ಭಾರತೀಯರು ನಡೆಸಿದ ಹೋರಾಟಕ್ಕೆ ಸಾಕ್ಷಿಯಾಗಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಸೇಂಟ್ ಜಾರ್ಜ್ ಕೋಟೆಯು ಚನ್ನೈನ ಕೋರಮಂಡಲ್ ಕರಾವಳಿ ತೀರದ ಬಳಿಯಿದೆ. ಈ ಕೋಟೆಯನ್ನು 1644 ಏಪ್ರಿಲ್ 23ರಂದು ತೆರೆಯಲಾಗಿದೆ ಎಂದು ತಮಿಳುನಾಡು ಪ್ರವಾಸೋಧ್ಯಮ ಇಲಾಖೆಯ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.

ಸೇಂಟ್ ಜಾರ್ಜ್ ಕೋಟೆಯ ಪ್ರಮುಖ ಆಕರ್ಷಣೆ ಎಂದರೆ ವಸ್ತು ಸಂಗ್ರಹಾಲಯ. ಇಲ್ಲಿ ಭಾರತದ ಇತಿಹಾಸದ ವಿವಿಧ ಮಜಲುಗಳಲ್ಲಿ ಬಳಕೆಯಲ್ಲಿದ್ದ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. 10 ಗ್ಯಾಲರಿಗಳಿರುವ ಈ ವಸ್ತು ಸಂಗ್ರಹಾಲಯದಲ್ಲಿ ಭಾರತೀಯ ಇತಿಹಾಸಕ್ಕೆ ಸಂಬಂಧಿಸಿದ ಮೂರು ಸಾವಿರಕ್ಕೂ ಅಧಿಕ ಕಲಾಕೃತಿಗಳಿವೆ.

ಈ ವಸ್ತು ಸಂಗ್ರಹಾಲಯ 1948 ಜನವರಿ 31 ರಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.