ನವದೆಹಲಿ:ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಹೂಡಿಕೆ ಮಾಡುವುದನ್ನು ನಿಲ್ಲಿಸಿ ಎಂದು ಚೀನಾಕ್ಕೆ ಭಾರತ ಸೂಚಿಸಿದೆ.

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಲ್ಲಿ ಚೀನಾ ಹೂಡಿಕೆ ಮಾಡುವುದಕ್ಕೆ ಭಾರತ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದೆ. ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ಪಾಕಿಸ್ತಾನದ ಪ್ರತಿಭಟನೆಯನ್ನು ಚೀನಾ ಬೆಂಬಲಿಸಿದ ಬೆನ್ನಲ್ಲೇ ಭಾರತ ಈ ಸೂಚನೆ ನೀಡಿದೆ.

ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನ ಮತ್ತು ಚೀನಾ ನೀಡಿರುವ ಜಂಟಿ ಹೇಳಿಕೆಯನ್ನೂ ಭಾರತ ತಿರಸ್ಕರಿಸಿದೆ.

‘ಚೀನಾ ವಿದೇಶಾಂಗ ಸಚಿವರ ಪಾಕಿಸ್ತಾನ ಭೇಟಿ ಬಳಿಕ ಉಭಯ ರಾಷ್ಟ್ರಗಳು ಜಮ್ಮು–ಕಾಶ್ಮೀರವನ್ನು ಉದ್ದೇಶಿಸಿ ನೀಡಿರುವ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ. ಜಮ್ಮು–ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:370ನೇ ವಿಧಿ ರದ್ದತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ

ಚೀನಾ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರಾದವಾಂಗ್ ಯಿ ಹಾಗೂ ಶಾ ಮಹಮೂದ್ ಖುರೇಶಿ ಭಾನುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು.

ಪಾಕಿಸ್ತಾನ ಅತಿಕ್ರಮಿಸಿಕೊಂಡಿರುವ ಪ್ರದೇಶದಲ್ಲಿ (ಪಿಒಕೆ) ಆರ್ಥಿಕ ಕಾರಿಡಾರ್ ಯೋಜನೆ ಹಮ್ಮಿಕೊಂಡಿರುವ ಬಗ್ಗೆ ಭಾರತ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಾ ಬಂದಿದೆ. ಕಾರಿಡಾರ್ ಯೋಜನೆಯು ಜಮ್ಮು–ಕಾಶ್ಮೀರದ ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನವಾಗಿದ್ದು, ಇದನ್ನು ಭಾರತ ವಿರೋಧಿಸುತ್ತದೆ ಎಂದೂರವೀಶ್ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.