ಚೆನ್ನೈ: ದೇಶದ ಪ್ರಪ್ರಥಮ ಸೆಮಿ ಹೈಸ್ಪೀಡ್ ಸರಕು ಸಾಗಣೆ ರೈಲು ಈ ವರ್ಷದ ಡಿಸೆಂಬರ್ ವೇಳೆಗೆ ಸೇವೆ ಆರಂಭಿಸುವ ನಿರೀಕ್ಷೆಯಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ವಂದೇ ಭಾರತ್’ ರೈಲುಗಳ ಮಾದರಿಯಲ್ಲಿ 16 ಬೋಗಿಗಳಿರುವ ‘ಗತಿ ಶಕ್ತಿ’ ರೈಲು ಕಾರ್ಯಾರಂಭ ಮಾಡಲಿದೆ. ಇದರ ವೇಗ ಗಂಟೆಗೆ 160 ಕಿ.ಮೀ. ಚೆನ್ನೈನಲ್ಲಿ ಇರುವ ಸಮಗ್ರ ಬೋಗಿ ನಿರ್ಮಾಣ (ಐಸಿಎಫ್) ಇದರ ನಿರ್ಮಾಣ ನಡೆಯಲಿದೆ.

ಪ್ರಧಾನಿಯವರ ‘ಗತಿ ಶಕ್ತಿ’ ರೈಲು ಸೇವೆ ಚಿಂತನೆ ಸಾಕಾರಗೊಳಿಸಲು ರೈಲ್ವೆ ಮಂಡಳಿಯಲ್ಲಿ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಲಾಗಿದೆ. ತ್ವರಿತಗತಿಯಲ್ಲಿ ಜಾರಿಗೊಳಿಸಲು ಬೆಂಗಳೂರು, ದೆಹಲಿ, ಬಿಲಾಸ್ಪುರ್ದಲ್ಲಿಯೂ ಶಾಖೆ ತೆರೆಯಲಾಗಿದೆ.

‘ಮಾರುಕಟ್ಟೆಯಲ್ಲಿನ ಪ್ರತಿಕ್ರಿಯೆ ಆಧರಿಸಿ ಇಂತಹ ಎಷ್ಟು ರೈಲುಗಳ ಸೇವೆ ಆರಂಭಿಸಬೇಕು ಎಂದು ನಿರ್ಧರಿಸಲಾಗುವುದು. ಒಟ್ಟು 25 ರೈಲು ಆರಂಭಿಸುವ ಗುರಿ ಇದೆ’ ಎಂದು ಐಸಿಎಫ್ನ ಪ್ರಧಾನ ವ್ಯವಸ್ಥಾಪಕಎ.ಕೆ.ಅಗರವಾಲ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.