ಮಥುರಾ: ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ ಎಂದು ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಶುಕ್ರವಾರ ಹೇಳಿದ್ದಾರೆ.

ಚೌಧರಿ ಅವರು ಕೇಂದ್ರ ಮತ್ತು ರಾಜ್ಯ ಸಚಿವರೊಂದಿಗೆ ಮಥುರಾದ ಆರು ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

'ದೇವಸ್ಥಾನಗಳಲ್ಲಿ ಗಣ್ಯ ವ್ಯಕ್ತಿಗಳಿಂದ 'ಅಭಿಷೇಕ ಸಮಾರಂಭ' (ವಿಗ್ರಹಗಳ ಸ್ನಾನ) ನಡೆಸಲಾಯಿತು' ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್ ಹೇಳಿದರು.

ಆಶೇಶ್ವರ ಮಹಾದೇವ ದೇವಸ್ಥಾನ ನಂದಗಾಂವ್ನಲ್ಲಿ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದ ನಂತರ ಸಭೆಯೊಂದರಲ್ಲಿ ಮಾತನಾಡಿದ ಚೌಧರಿ, ಒಂದು ದೇಶವು ಆರ್ಥಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರಬಹುದು, ಆದರೆ ವಿಶ್ವದ ಯಾವುದೇ ದೇಶವು ಭಾರತವು ಸಾಧಿಸಿದ ಆಧ್ಯಾತ್ಮಿಕ ಎತ್ತರವನ್ನು ಮುಟ್ಟಲು ಸಾಧ್ಯವಿಲ್ಲ. ವಿಶ್ವದ ಯಾವುದೇ ದೇಶವು ವೇದ, ಪುರಾಣ ಅಥವಾ ಉಪನಿಷತ್ತುಗಳನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು.

ಕೇಂದ್ರ ಸಚಿವರಾದ ಎಸ್.ಪಿ.ಸಿಂಗ್ ಬಘೇಲ್ ಮತ್ತು ಬಿ.ಎಲ್.ವರ್ಮಾ ಅವರು ಕ್ರಮವಾಗಿ ಗಲ್ತೇಶ್ವರ ದೇವಸ್ಥಾನ-ಮಥುರಾ ಮತ್ತು ಗೋಪೇಶ್ವರ್ ಮಹಾದೇವ ದೇವಸ್ಥಾನ-ವೃಂದಾವನದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.