ಜೋಧ್ಪುರ: ‘ಈಗಾಗಲೇ ಎಂಟು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಇನ್ನೂ ಮೂರು ಯುದ್ಧವಿಮಾನಗಳು ಮಾಸಾಂತ್ಯದೊಳಗೆ ಬರುವ ಸಾಧ್ಯತೆ ಇದೆ’ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಶನಿವಾರ ಹೇಳಿದರು.

ಭಾರತೀಯ ವಾಯುಪಡೆ (ಐಎಎಫ್) ಹಾಗೂ ಫ್ರಾನ್ಸ್ನ ವಾಯುಪಡೆ ಜಂಟಿಯಾಗಿ ನಡೆಸಿದ ವೈಮಾನಿಕ ಕವಾಯತು ‘ಡೆಸರ್ಟ್ ನೈಟ್–21’ ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಜೊತೆಗೆ ಐದನೇ ಜನರೇಷನ್ ಯುದ್ಧ ವಿಮಾನ ಯೋಜನೆಯನ್ನು ಐಎಎಫ್ ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ ಆರನೇ ಜನರೇಷನ್ ಸಾಮರ್ಥ್ಯವನ್ನೂ ಅಳವಡಿಸುವ ಯೋಜನೆ ಇದೆ. ಪ್ರಸ್ತುತ ನಮ್ಮ ಬಳಿ ಇರುವ ಆಧುನಿಕ ಯುದ್ಧ ವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೆನ್ಸರ್ಗಳನ್ನು ಅಳವಡಿಸುವುದು ಗುರಿಯಾಗಿದೆ’ ಎಂದರು.

‘ರಫೇಲ್ ಯುದ್ಧ ವಿಮಾನಗಳು ಬಂದ ಸಂದರ್ಭದಲ್ಲಿ ಅವುಗಳನ್ನು ಮೊದಲು ಕಾರ್ಯಾಚರಣೆಗೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಆಗಿತ್ತು. ಈಗಾಗಲೇ ಇದನ್ನು ನಾವು ಸಾಧಿಸಿದ್ದು, ಡೆಸರ್ಟ್ ನೈಟ್ನಲ್ಲಿ ರಫೇಲ್ ಕವಾಯತು ಇದರ ಫಲಿತಾಂಶ. ಮುಂದಿನ ವರ್ಷಾಂತ್ಯದೊಳಗೆ ಎಲ್ಲ ರಫೇಲ್ ಯುದ್ಧ ವಿಮಾನಗಳು ಪೂರೈಕೆ ಆಗಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.