ಅಹಮದಾಬಾದ್: ಗುಜರಾತ್ ಕರಾವಳಿ ತೀರದಲ್ಲಿ ಮೀನುಗಾರಿಕೆ ತೆರಳಿದ್ದ ದೋಣಿಯೊಳಕ್ಕೆ ನೀರು ನುಗ್ಗಿ ಅಪಾಯದಲ್ಲಿ ಸಿಲುಕಿದ್ದ ಆರು ಮಂದಿಯನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

ಕರಾವಳಿ ತೀರದಿಂದ 80 ಕಿ.ಮೀ. ದೂರದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅಪಾಯದ ಕರೆ ಬಂದ ತಕ್ಷಣ ರಕ್ಷಣೆಗೆ ಧಾವಿಸಿದ ‘ಆರುಷ್’ ಹೆಸರಿನ ನೌಕೆ ಸಂಕಷ್ಟದಲ್ಲಿ ಇದ್ದವರನ್ನು ರಕ್ಷಿಸಿತು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯ ಮೀನು ಸಂಗ್ರಹಾಗಾರದಲ್ಲಿ ತೂತು ಬಿದ್ದುದರಿಂದ ನೀರು ಒಳಗೆ ನುಗ್ಗಿತ್ತು. ರಕ್ಷಣಾ ಸಿಬ್ಬಂದಿ ಮೊದಲಿಗೆ ಸಬ್‌ಮರ್ಸಿಬಲ್ ಪಂಪ್ ಬಳಸಿ ನೀರು ಹೊರಗೆ ಹಾಕಿ, ತೂತನ್ನು ಬಂದ್ ಮಾಡಿ ದೋಣಿ ಮತ್ತೆ ತೇಲುವಂತೆ ಮಾಡಿದರು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.