ನವದೆಹಲಿ: ಉಕ್ರೇನ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಕಟಿಸಿದೆ.

ಉಕ್ರೇನ್‌ನ ಕೀವ್‌ನಲ್ಲಿ ಮೇ 17ರಿಂದ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯಾಚರಣೆ ಶುರುವಾಗಲಿದೆ. ಉಕ್ರೇನ್‌ನಲ್ಲಿ ರಷ್ಯಾ ಸೇನಾ ಪಡೆಗಳ ಆಕ್ರಮಣ ಹೆಚ್ಚಿದ ಬೆನ್ನಲ್ಲೇ ಸುರಕ್ಷತೆಯ ಕಾರಣಗಳಿಂದಾಗಿ ರಾಯಭಾರ ಕಚೇರಿಯು ತಾತ್ಕಾಲಿಕವಾಗಿ ಪೋಲೆಂಡ್ ರಾಜಧಾನಿ ವಾರ್ಸಾದಿಂದ ಕಾರ್ಯಾಚರಿಸುತ್ತಿದೆ.

ಮಾರ್ಚ್ 13ರಂದು ರಾಯಭಾರ ಕಚೇರಿಯನ್ನು ಕೀವ್‌ನಿಂದ ವಾರ್ಸಾಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು.

'ತಾತ್ಕಾಲಿಕವಾಗಿ ವಾರ್ಸಾದಿಂದ (ಪೋಲೆಂಡ್) ಕಾರ್ಯಾಚರಿಸುತ್ತಿರುವ ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಮೇ 17ರಿಂದ ಕೀವ್‌ನಲ್ಲಿ ಕಾರ್ಯಾಚರಣೆ ಪುನರಾರಂಭಿಸಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

ಇದನ್ನೂ ಓದಿ: ಜಮ್ಮು ಸಮೀಪ ಯಾತ್ರಾರ್ಥಿಗಳಿದ್ದ ಬಸ್ಗೆ ಬೆಂಕಿ; 4 ಮಂದಿ ಸಾವು, 20 ಜನರಿಗೆ ಗಾಯ

ಉಕ್ರೇನ್ ರಾಜಧಾನಿಯಲ್ಲಿ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಕಚೇರಿ, ಕಾರ್ಯಾಚರಣೆಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಿದ್ದು, ಇದೀಗ ಭಾರತ ಸರ್ಕಾರವು ರಾಯಭಾರ ಕಚೇರಿ ಕಾರ್ಯಾಚರಣೆ ಶುರು ಮಾಡುವ ನಿರ್ಧಾರ ಕೈಗೊಂಡಿದೆ.

ಫೆಬ್ರುವರಿ 26ರಿಂದ 'ಆಪರೇಷನ್ ಗಂಗಾ' ಮಿಷನ್‌ನ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಸುಮಾರು 20,000 ಭಾರತೀಯರನ್ನು ಕೇಂದ್ರ ಸರ್ಕಾರವು ದೇಶಕ್ಕೆ ಕರೆತಂದಿತ್ತು. ಅನಂತರ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.