ನವದೆಹಲಿ: ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್ಗಳ ಖರೀದಿ ಒಪ್ಪಂದದ ಕುರಿತಂತೆ ಬೆಲೆ ಮತ್ತು ಇತರ ಸಂಬಂಧಿತ ವಿಷಯಗಳ ಕುರಿತಾಗಿ ಭಾರತ ಮತ್ತು ಫ್ರಾನ್ಸ್ ಅಧಿಕಾರಿಗಳು ಮಾತುಕತೆ ಆರಂಭಿಸಿದ್ದಾರೆ.

ಮೇ 30ರಂದೇ ಮಾತುಕತೆ ನಡೆಯಬೇಕಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೂನ್ ಎರಡನೇ ವಾರಕ್ಕೆ ಮಾತುಕತೆ ಮುಂದೂಡಲಾಗಿತ್ತು.

'ಭಾರತಕ್ಕೆ ರಫೇಲ್ ಯುದ್ಧ ವಿಮಾನ ಮಾರಾಟದ ನಿರ್ವಹಣೆ ಮಾಡುವ ಫ್ರಾನ್ಸ್ ಯುದ್ಧೋಪಕರಣ ವಿಭಾಗದ ಡಿಜಿ ಸೇರಿದಂತೆ ಫ್ರೆಂಚ್ ನಿಯೋಗವು ನವದೆಹಲಿಗೆ ಬಂದಿದೆ’ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಭಾರತದ ಪರವಾಗಿ ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಶಸ್ತ್ರಾಸ್ತ್ರ ಖರೀದಿ ವಿಭಾಗದ ಅಧಿಕಾರಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದಾರೆ.

ಈ ಖರೀದಿ ಯೋಜನೆಯು ಸುಮಾರು ₹50,000 ಕೋಟಿ ಮೊತ್ತದ್ದಾಗಿದ್ದು, ಇವುಗಳ ಖರೀದಿ ಬಳಿಕ ಭಾರತದಲ್ಲಿ ರಫೇಲ್ ಯುದ್ಧ ವಿಮಾನಗಳ ಸಂಖ್ಯೆ 60 ದಾಟಲಿದೆ. ಈಗ ಭಾರತದಲ್ಲಿ 36 ರಫೇಲ್ ಯುದ್ಧ ವಿಮಾನಗಳಿವೆ.

ನೌಕಾಪಡೆಗಾಗಿ ಖರೀದಿಸಲಾಗುತ್ತಿರುವ ಈ ಹೊಸ ಯುದ್ಧ ವಿಮಾನಗಳನ್ನು ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಯುದ್ಧನೌಕೆಗಳ ಮೂಲಕ ಕಾರ್ಯಾಚರಣೆ ನಡೆಸಬಹುದಾಗಿದೆ.

26 ರಫೇಲ್ ಮರೈನ್ ಜೆಟ್ ಖರೀದಿ ಕುರಿತಾದ ಭಾರತದ ಪ್ರಸ್ತಾವನೆಗೆ ಫ್ರಾನ್ಸ್ ತನ್ನ ಪ್ರತಿಕ್ರಿಯೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.