ನವದೆಹಲಿ: ವಸಾಹತುಶಾಹಿ ಮನಸ್ಥಿತಿ ಹೊಂದಿರುವವರು ಭಾರತದ ಅಭಿವೃದ್ಧಿಗೆ ತೊಡಕಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲೂ ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ ಎಂದು ಅವರು ದೂಷಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸಾಹತುಶಾಹಿ ಆಡಳಿತ ಕೊನೆಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಸಹ ವಸಾಹತುಸಾಹಿ ಮನಸ್ಥಿತಿ ಈಗಲೂ ಅಸ್ತಿತ್ವದಲ್ಲಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶದ ಬೆಳವಣಿಗೆಯ ಹಾದಿಯಲ್ಲಿ ತೊಡಕಾಗಿದೆ ಎಂದು ಮೋದಿ ಹೇಳಿದ್ದಾರೆ.

‘ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ಹಾದಿಯಲ್ಲಿರುವ ಏಕೈಕ ದೇಶ ಭಾರತವಾಗಿದೆ. ಪರಿಸರದ ಹೆಸರಲ್ಲಿ ಭಾರತದ ಮೇಲೆ ಹಲವು ಒತ್ತಡಗಳನ್ನು ಸೃಷ್ಟಿಸಲಾಗಿದೆ. ಅವೆಲ್ಲವೂ ವಸಾಹತುಶಾಹಿ ಮನಸ್ಥಿತಿಯ ಫಲಿತಾಂಶವಾಗಿದೆ’ಎಂದು ಮೋದಿ ಹೇಳಿದ್ದಾರೆ.

‘ನಮ್ಮ ದೇಶದಲ್ಲಿಯೂ ಆ ರೀತಿಯ ಮನಸ್ಥಿತಿಗಳಿಂದಾಗಿ ಬೆಳವಣಿಗೆಯ ಹಾದಿಯಲ್ಲಿ ಅಡ್ಡಗಾಲು ಹಾಕಲಾಗುತ್ತಿದೆ. ಕೆಲವೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ, ಮಗದೊಮ್ಮೆ ಮತ್ಯಾರದೊ ಸಹಾಯದಿಂದ ತೊಡಕು ಸೃಷ್ಟಿಸಲಾಗುತ್ತಿದೆ’ಎಂದು ಅವರು ಹೇಳಿದ್ಧಾರೆ.

ವಸಾಹತುಶಾಹಿಗಳು ಸೃಷ್ಟಿಸಿದ ತೊಡಕನ್ನು ನಿವಾರಿಸುವಲ್ಲಿ ಸಂವಿಧಾನವು ಅತ್ಯಂತ ದೊಡ್ಡ ಶಕ್ತಿಯಾಗಿದೆ ಎಂದು ಮೋದಿ ಹೇಳಿದರು.

ಸರ್ಕಾ ರ ಮತ್ತು ನ್ಯಾಯಾಂಗ ವ್ಯವಸ್ಥೆ ಎರಡೂ ಸಹ ಸಂವಿಧಾನದಿಂದಲೇ ಜೀವ ತಳೆದಿದ್ದು, ಅವುಗಳನ್ನು ಅವಳಿ ಎಂದು ಕರೆಯಬಹುದು ಎಂದಿದ್ದಾರೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ಇವುಗಳು ಸಂವಿಧಾನದ ಬಲವಾದ ಆಶಯವಾಗಿವೆ ಎಂದು ಮೋದಿ ಹೇಳಿದ್ದಾರೆ.

ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡಬಾರದು ಎಂಬುದು ಸಂವಿಧಾನದ ಧ್ಯೆಯವಾಗಿದ್ದು, ನಾವು ಅದನ್ನು ತೋರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.