ಬೆಂಗಳೂರು: ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರನ್ನು 'ಕುಶ್ವಂತ್ ಸಿಂಗ್ ಸಾಹಿತ್ಯ ಉತ್ಸವ'ಕ್ಕೆ ಕರೆಯಿಸಿ ಅವರಿಂದ ನೃತ್ಯ ಮಾಡಿಸಿದ್ದಕ್ಕೆ ಸಾಹಿತ್ಯ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 18 ರಿಂದ 20 ರವರೆಗೆ ಹಿಮಾಚಲ ಪ್ರದೇಶದ ಕಾಸೌಳಿಯಲ್ಲಿ ಕುಶ್ವಂತ್ ಸಿಂಗ್ ಫೌಂಡೇಶನ್ ವತಿಯಿಂದ ಕುಶ್ವಂತ್ ಸಿಂಗ್ ಸಾಹಿತ್ಯ ಉತ್ಸವ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಲೆ ಆರೋಪಿ ಇಂದ್ರಾಣಿ ಮುಖರ್ಜಿ ಅವರಿಗೂ ಆಹ್ವಾನವಿತ್ತು.

ಈ ಕಾರ್ಯಕ್ರಮದಲ್ಲಿ ಇಂದ್ರಾಣಿ ಸನ್ ಕಿಸ್ಸ್ಡ್ ಪಿಯೊನಿಕ್ಸ್ ಎಂಬ ಪರಿಕಲ್ಪನೆಯಡಿ ಸಮೂಹ ನೃತ್ಯ ನಡೆಸಿಕೊಟ್ಟಿದ್ದಾರೆ. ಅಲ್ಲದೇ ಪ್ಯಾನಲ್ ಚರ್ಚೆಯಲ್ಲೂ ಅವರು ಭಾಗಿಯಾಗಿದ್ದರು.

ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಕೊಲೆ ಆರೋಪಿಯನ್ನು ಕರೆಯಿಸಿ ಅವರಿಂದ ನೃತ್ಯ ಮಾಡಿಸಿದ್ದಕ್ಕೆ ಅನೇಕ ಸಾಹಿತ್ಯ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುಡ್ಡಿದ್ದವರು ನಮ್ಮ ದೇಶದಲ್ಲಿ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನ ಎಂದು ಕಮೆಂಟ್ ಮಾಡಿದ್ದಾರೆ.

2015 ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿ ರಾಯಗಢ ಅರಣ್ಯದಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಇಂದ್ರಾಣಿ ಅವರನ್ನು ಸಿಬಿಐ ಬಂದಿಸಿತ್ತು. ಈ ಆರೋಪದ ಮೇಲೆ ಅವರು 6 ವರ್ಷ ಜೈಲಿನಲ್ಲಿ ಇದ್ದರು. 2022 ರಲ್ಲಿ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು.

ಐಎನ್ಎಕ್ಸ್ ಮೀಡಿಯಾ ಹೌಸ್ನ ಅಧ್ಯಕ್ಷರಾಗಿದ್ದ ಪೀಟರ್ ಮುಖರ್ಜಿ ಅವರ ಪತ್ನಿಯಾಗಿದ್ದ ಇಂದ್ರಾಣಿ ಮುಖರ್ಜಿ ಅವರು ಉದ್ಯಮ ವಲಯದಲ್ಲಿ ಹೆಸರು ಮಾಡಿದ್ದರು. ಈ ಕುರಿತು ದಿ ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.