ತಿರುವನಂತಪುರ: ‘ಆತ್ಮಕಥೆ ಪ್ರಕಟಿಸುವ ನಿರ್ಧಾರವನ್ನು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಕೈಬಿಟ್ಟಿದ್ದಾರೆ. ಹಿಂದಿನ ಅಧ್ಯಕ್ಷ ಕೆ.ಶಿವನ್ ಕುರಿತು ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದ ಕೆಲ ಅಂಶಗಳು ವಿವಾದಾಸ್ಪದವಾದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

‘ನಿಲವು ಕುಡಿಚ ಸಿಂಹಗಳ್’ (ಬೆಳದಿಂಗಳು ಕುಡಿದ ಸಿಂಹಗಳು) ಶೀರ್ಷಿಕೆಯಡಿ ಪ್ರಕಟಿಸಲು ಉದ್ದೇಶಿಸಿದ್ದ ಆತ್ಮಕಥೆಯನ್ನು ಪ್ರಕಟಿಸುವ ತೀರ್ಮಾನವನ್ನು ಕೈಬಿಟ್ಟಿದಿದ್ದೇನೆ’ ಎಂದು ಸೋಮನಾಥ್ ಅವರು ದೃಢಪಡಿಸಿದರು.

ಸುದ್ದಿಸಂಸ್ಥೆಯ ಜೊತೆಗೆ ಮಾತನಾಡಿದ ಅವರು, ‘ಯಾವುದೇ ಒಂದು ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ತಲುಪಲು ಪ್ರತಿಯೊಬ್ಬರು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಆ ನಿರ್ದಿಷ್ಟ ಸ್ಥಾನಕ್ಕೆ ಹಲವರು ಅರ್ಹರಿರಬಹುದು. ನಾನು ಆ ಅಂಶವನ್ನೇ ಆತ್ಮಕಥೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲು ಬಯಸಿದ್ದೆ. ವ್ಯಕ್ತಿಗತವಾಗಿ ಯಾರನ್ನೂ ಗುರಿಯಾಗಿಸಿ ಅಭಿಪ್ರಾಯವನ್ನು ದಾಖಲಿಸಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಚಂದ್ರಯಾನ–2 ಯೋಜನೆಯ ವೈಫಲ್ಯದ ನಿರ್ಧಾರ ಪ್ರಕಟಿಸುವಾಗ ಸ್ಪಷ್ಟತೆಯ ಕೊರತೆ ಇತ್ತು ಎಂಬ ಅಂಶವನ್ನು ನನ್ನ ಅಪ್ರಕಟಿತ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದೆ ಎಂದು ಒಪ್ಪಿಕೊಂಡರು.

‘ಯಾರನ್ನೂ ಟೀಕಿಸಿದೆ ಎದುರಾಗುವ ಸವಾಲು, ತೊಡಕುಗಳನ್ನು ದಾಟಿ ಗುರಿಯನ್ನು ತಲುಪಲು ಓದುಗರಿಗೆ ಪ್ರೇರೇಪಣೆ ಆಗುವುದೇ ನನ್ನ ಆತ್ಮಕಥೆಯ ಉದ್ದೇಶವಾಗಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.