ಬೆಂಗಳೂರು (ಪಿಟಿಐ): ಆದಿತ್ಯ–ಎಲ್1 ಉಪಗ್ರಹವನ್ನು ಅಂತಿಮ ಕಕ್ಷೆಗೆ ಸೇರಿಸಲು ಬೇಕಿರುವ ಮಹತ್ವದ ಕಾರ್ಯಾಚರಣೆಯನ್ನು ಶನಿವಾರ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ.

ಉಪಗ್ರಹವನ್ನು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಕಕ್ಷೆಯಲ್ಲಿ ಇರಿಸಲಾಗುವುದು ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ (ಎಲ್1 ಪಾಯಿಂಟ್) ನೆಲೆಯಾಗುವ ಉಪಗ್ರಹಕ್ಕೆ ಯಾವುದೇ ಅಡ್ಡಿಗಳು ಇಲ್ಲದೆ ಸೂರ್ಯನನ್ನು ವೀಕ್ಷಿಸಲು ಅವಕಾಶ ಸಿಗುತ್ತದೆ. ಇದರಿಂದಾಗಿ ಸೂರ್ಯನ ಚಟುವಟಿಕೆಗಳನ್ನು ಗಮನಿಸುವಲ್ಲಿ ಹೆಚ್ಚಿನ ಪ್ರಯೋಜನಗಳು ಲಭಿಸಲಿವೆ ಎಂದಿದ್ದಾರೆ.

‘ಈ ಕಾರ್ಯಾಚರಣೆಯು ಶನಿವಾರ ಸಂಜೆ 4ರ ಸುಮಾರಿಗೆ ನಡೆಯಲಿದೆ. ಈ ಕಾರ್ಯಾಚರಣೆಯನ್ನು ನಡೆಸದೆ ಇದ್ದಲ್ಲಿ ಉಪಗ್ರಹವು ತನ್ನ ಪಯಣವನ್ನು ಮುಂದುವರಿಸುತ್ತದೆ, ಅದು ಸೂರ್ಯನ ಕಡೆಗೆ ಸಾಗಿಬಿಡಬಹುದು’ ಎಂದು ಇಸ್ರೊ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.