ನವದೆಹಲಿ : ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಮಿಳುನಾಡು ಮಹಾರಾಷ್ಟ್ರ ಹಾಗೂ ಕರ್ನಾಟಕ ತಂದಿರುವ ತಿದ್ದುಪಡಿಯನ್ನು ಎತ್ತಿ ಹಿಡಿದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಿಸಿ ಕಾನೂನಿನಡಿ ಪರಿಹಾರ ಹುಡುಕಲಾಗುವುದು ಎಂದು ಪ್ರಾಣಿ ದಯಾ ಸಂಘ ‘ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್’ (ಪೆಟಾ) ಗುರುವಾರ ಹೇಳಿದೆ.

‘ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಜಲ್ಲಿಕಟ್ಟು ಎತ್ತಿನ ಗಾಡಿ ಸ್ಪರ್ಧೆ ಹಾಗೂ ಕಂಬಳಕ್ಕೆ ಅನುಮತಿ ನೀಡಿದೆ. ಈ ಕ್ರೀಡೆಗಳಲ್ಲಿ ಪ್ರಾಣಿಗಳಿಗೆ ಹಿಂಸಿಸಲಾಗುತ್ತದೆ. ಅವುಗಳನ್ನು ರಕ್ಷಿಸುವ ಸಂಬಂಧ ಕಾನೂನಿನಡಿ ಇರುವ ಮಾರ್ಗಗಳನ್ನು ಹುಡುಕುತ್ತೇವೆ’ ಎಂದು ಸಂಘಟನೆ ಹೇಳಿದೆ.

ತೀರ್ಪಿನಿಂದ ನಿರಾಶೆಯಾಗಿದೆ: ಗೌರಿ ಮೌಲೇಖಿ

ಪೀಪಲ್ಸ್ ಫಾರ್ ಅನಿಮಲ್ಸ್(ಪಿಎಫ್ಎ)ನ ಟ್ರಸ್ಟಿ ಗೌರಿ ಮೌಲೇಖಿ ‘ಜಲ್ಲಿಕಟ್ಟು ಹಾಗೂ ಕಂಬಳದಂತಹ ಆಚರಣೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ. ಸುಪ್ರೀಂಕೋರ್ಟ್ನ ಈ ತೀರ್ಪಿನಿಂದ ನಿರಾಶೆಯಾಗಿದೆ’ ಎಂದು ಹೇಳಿದರು.

‘ಸಂಸ್ಕೃತಿ ಹೆಸರಿನಲ್ಲಿ ನೈತಿಕತೆಯೊಂದಿಗೆ ರಾಜಿಯಾಗಕೂಡದು. ಸಲಿಂಗ ಮದುವೆಗೆ ಮಾನ್ಯತೆ ಕೋರಿದ ಅರ್ಜಿಗಳ ವಿಚಾರಣೆ ವೇಳೆ ಇದೇ ಸುಪ್ರೀಂಕೋರ್ಟ್ ಸಂಸ್ಕೃತಿಯನ್ನು ಬೇರೆ ರೀತಿಯೇ ವ್ಯಾಖ್ಯಾನಿಸುತ್ತದೆ. ಜಲ್ಲಿಕಟ್ಟು ಕ್ರೀಡೆ ವೇಳೆ ಗಾಯಗೊಂಡ ಜನರು ಸಾವನ್ನಪ್ಪಿದ ಉದಾಹರಣೆಗಳಿವೆ. ಆದರೆ ಅಮೂಲ್ಯ ಪರಂಪರೆ ಎನ್ನುವ ಮೂಲಕ ಈ ಕ್ರೀಡೆಯನ್ನು ಸಂರಕ್ಷಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.