ಪಣಜಿ: ಗೋವಾದ ಎಲ್ಲಾ ಔಷಧಾಲಯಗಳಲ್ಲಿ ಜನೌಷಧ ವಿಭಾಗಗಳನ್ನು ಕಡ್ಡಾಯವಾಗಿ ತೆರೆಯುವಂತೆ ಮಾಡಲಾಗುವುದು. ಇದರಿಂದಾಗಿ ಸಮಾಜದ ಎಲ್ಲಾ ವರ್ಗಗಳ ಜನರಿಗೂ ಉತ್ತಮ ಗುಣಮಟ್ಟದ ಔಷಧಗಳು ದೊರೆಯುತ್ತವೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಸೋಮವಾರ ತಿಳಿಸಿದರು.

ಈ ಕುರಿತು ಆರೋಗ್ಯ ಇಲಾಖೆಯು 48 ಗಂಟೆಯೊಳಗೆ ಸುತ್ತೋಲೆ ಹೊರಡಿಸಲಿದೆ. ಗೋವಾದ ಆಹಾರ ಮತ್ತು ಔಷಧ ನಿಯಂತ್ರಕ (ಎಫ್ಡಿಎ) ಇದರ ಮೇಲ್ವಿಚಾರಣೆ ಹೊರಡಿಸಲಿದೆ ಎಂದು ಎಂದು ರಾಣೆ ಅವರು ಜನೌಷಧ ದಿನದ ಅಂಗವಾಗಿ ಟ್ವೀಟ್ ಮಾಡಿದ್ದಾರೆ.

‘ಗೋವಾದ ಎಲ್ಲಾ ಔಷಧ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ಜನೌಷಧ ವಿಭಾಗಗಳನ್ನು ತೆರೆಯುವಂತೆ ಸರ್ಕಾರವು ಒಮ್ಮತದ ನಿರ್ಧಾರ ತೆಗೆದುಕೊಂಡಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಔಷಧ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆ ಇದಾಗಿದ್ದು, ಈ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ’ ಎಂದು ಟ್ವೀಟ್ ಅವರು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.