ಲಖನೌ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ತೊರೆಯಲು ಮುಂದಾಗಿರುವ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ ಚೌಧರಿ ಅವರು ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಸೇರಲು ಬಹುತೇಕ ನಿರ್ಧರಿಸಿದ್ದಾರೆ.

ಜಯಂತ ಚೌಧರಿ ಅವರ ತಾತ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ‘ಭಾರತ ರತ್ನ’ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬಿಜೆಪಿ ಜೊತೆ ಕೈ ಜೋಡಿಸುವಿರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಇಲ್ಲ ಎಂದು ಹೇಳಲಿಲ್ಲ. ಅಲ್ಲದೆ, ‘ಈ ವಿಚಾರದಲ್ಲಿ ಇನ್ನೂ ಅನುಮಾನವಿದೆಯೇ? ನಿಮ್ಮ ಪ್ರಶ್ನೆಗೆ ಹೇಗೆ ಇಲ್ಲ ಎಂದು ಹೇಳಲಿ’ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಜೊತೆಗೆ, ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೆರೆದಿರುವ ಅವರು, ಈ ಹಿಂದಿನ ಸರ್ಕಾರ ಮಾಡಲಾಗದ್ದನ್ನು ಮೋದಿ ಮಾಡಿದ್ದಾರೆ ಎಂದು ‘ಎಕ್ಸ್’ ವೇದಿಕೆಯಲ್ಲಿ ಕೊಂಡಾಡಿದ್ದಾರೆ.

ರಾಜ್ಯದ ಸಂಪುಟದಲ್ಲಿ ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬೇಡಿಕೆ ಮತ್ತು ಸೀಟು ಹಂಚಿಕೆ ಕುರಿತ ಮಾತುಕತೆ ಮುಗಿದ ಬಳಿಕ ಜಯಂತ ಚೌಧರಿ ಅವರು, ಎನ್ಡಿಎ ಸೇರುವ ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ ಎಂದು ಆರ್ಎಲ್ಡಿ ಪಕ್ಷದ ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾಗಪತ್ ಮತ್ತು ಬಿಜನೋರ್ ಲೋಕಸಭಾ ಕ್ಷೇತ್ರಗಳನ್ನು ಆರ್ಎಲ್ಡಿ ಪಕ್ಷಕ್ಕೆ ಬಿಟ್ಟುಕೊಡುವುದು, ಪಕ್ಷದ ಮುಖ್ಯಸ್ಥ ಜಯಂತ ಚೌಧರಿ ಅವರಿಗೆ ರಾಜ್ಯಸಭೆ ಸ್ಥಾನ ಮತ್ತು ರಾಜ್ಯದಲ್ಲಿ ಸಚಿವ ಸ್ಥಾನವನ್ನು ಆರ್ಎಲ್ಡಿ ಪಕ್ಷಕ್ಕೆ ನೀಡಲು ಬಿಜೆಪಿ ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.