ಜಮ್ಮು: ಜಮ್ಮು ನಗರದಲ್ಲಿ ನಿರ್ವಸಿತ ಕಾಶ್ಮೀರಿ ಪಂಡಿತರು ನಿರ್ಮಿಸಿಕೊಂಡಿದ್ದ ಒಂದು ಡಜನ್ ಅಂಗಡಿಗಳನ್ನು ಜಮ್ಮು ಅಭಿವೃದ್ಧಿ ಪ್ರಾಧಿಕಾರವು (ಜೆಡಿಎ) ನೋಟಿಸ್ ನೀಡದೆಯೇ ಬುಧವಾರ ನೆಲಸಮಗೊಳಿಸಿದ್ದಾಗಿ ಆರೋಪಿಸಿದ ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

‘ಬುಧವಾರದಿಂದಲೇ ನೆಲಸಮಗೊಳಿಸುವ ಕೆಲಸ ಆರಂಭಗೊಂಡಿತು. ಮೂರು ದಶಕಗಳ ಹಿಂದೆ ಜೆಡಿಎಗೆ ಸೇರಿದ ಮೂತಿ ಕ್ಯಾಂಪ್ ಪ್ರದೇಶದಲ್ಲಿ ಕಾಶ್ಮೀರದ ಪಂಡಿತರು ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನೇ ನೆಲಸಮ ಮಾಡಲಾಗಿದೆ’ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು.

ಸ್ಥಳಕ್ಕೆ ಭೇಟಿ ನೀಡಿದ ಪರಿಹಾರ ವಿಭಾಗದ ಆಯುಕ್ತ ಅರವಿಂದ್ ಕರ್ವಾನಿ, ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.

‘ಅಂಗಡಿಗಳು ಇದ್ದ ಜಾಗವು ಜೆಡಿಎಗೆ ಸೇರಿದ್ದಾಗಿದೆ. ಮುಥಿ–2ನೇ ಹಂತದಲ್ಲಿ ಹೊಸತಾಗಿ ಅಂಗಡಿಗಳನ್ನು ನಿರ್ಮಿಸಲಾಗುತ್ತಿದ್ದು, ಆ ಜಾಗದಲ್ಲೇ ಅಂಗಡಿ ಕಳೆದುಕೊಂಡವರಿಗೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಜೆಡಿಎ ನಿರ್ಧಾರಕ್ಕೆ ಬಿಜೆಪಿ, ಪಿಡಿಪಿ, ಅಪ್ನಿ ಪಕ್ಷ ಹಾಗೂ ಕಾಶ್ಮೀರ ಪಂಡಿತರ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸಂತ್ರಸ್ತರಿಗೆ ಕೂಡಲೇ ಹೊಸ ಮಳಿಗೆಗಳನ್ನು ಸ್ಥಾಪಿಸಿಕೊಡಬೇಕು ಎಂದು ಆಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.