ರಾಂಚಿ: ಜಾರ್ಖಂಡ್ನ ಆಡಳಿತಾರೂಢ ಯುಪಿಎ ಮೈತ್ರಿಕೂಟದ ನಾಯಕರು ರಾಜ್ಯಪಾಲ ರಮೇಶ್ ಬೈಸ್ ಅವರನ್ನು ಗುರುವಾರ ಭೇಟಿಯಾಗಿದ್ದಾರೆ. ಚುನಾವಣಾ ಆಯೋಗವು ಸಲ್ಲಿಸಿದ್ದ ವರದಿಯಲ್ಲಿ ಇರುವ ಶಿಫಾರಸುಗಳ ಆಯ್ದ ವಿಷಯಗಳ ಸೋರಿಕೆಯ ಕುರಿತಂತೆ ನಿಯೋಗವು ಕಳವಳ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುವುದು ಎಂದು ವರದಿಯಲ್ಲಿ ಇದೆ ಎಂಬುದನ್ನು ಸೋರಿಕೆ ಮಾಡಲಾಗಿದೆ ಎಂದು ನಿಯೋಗವು ಹೇಳಿದೆ. ಈ ಸೋರಿಕೆಯು ಅರಾಜಕತೆಗೆ ಕಾರಣವಾಗಲಿದೆ ಎಂದು ನಿಯೋಗವು ರಾಜ್ಯಪಾಲರಿಗೆ ತಿಳಿಸಿದೆ.

ಚುನಾವಣಾ ಆಯೋಗವು ನೀಡಿದ ಶಿಫಾರಸಿನಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸುವಂತೆಯೂ ರಾಜ್ಯಪಾರಲನ್ನು ಕೋರಿದೆ.

ಹೇಮಂತ್ ಸೊರೇನ್ ಅವರ ಭವಿಷ್ಯದ ಕುರಿತು ಹರಡುತ್ತಿರುವ ವದಂತಿಯು, ಚುನಾಯಿತ ಸರ್ಕಾರವೊಂದನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ಉತ್ತೇಜನ ನೀಡಿದೆ. ಹೇಮಂತ್ ಅವರು ಅನರ್ಹಗೊಂಡರೂ ಸರ್ಕಾರವೇನೂ ಪತನವಾಗದು. ಏಕೆಂದರೆ, ಮೈತ್ರಿಕೂಟವು ಅತ್ಯಂತ ಸ್ಪಷ್ಟ ಬಹುಮತ ಹೊಂದಿದೆ ಎಂದು ನಿಯೋಗವು ರಾಜ್ಯಪಾಲರಿಗೆ ತಿಳಿಸಿದೆ.

ಬಳಿಕ, ಹೇಮಂತ್ ನೇತೃತ್ವದಲ್ಲಿ ಜಾರ್ಖಂಡ್ ಸಚಿವ ಸಂಪುಟದ ಸಭೆ ನಡೆದಿದೆ. ಇದೇ 5ರಂದು ಒಂದು ದಿನದ ವಿಶೇಷ ಅಧಿವೇಶನ ನಡೆಸಲು ರಾಜ್ಯಪಾಲರನ್ನು ಕೋರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.