ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗುವ ಸಂಭವ ಇದೆ.

ಎನ್ಡಿಎದ ಉನ್ನತ ಮೂಲಗಳು ’ಪ್ರಜಾವಾಣಿ‘ಗೆ ಇದನ್ನು ದೃಢಪಡಿಸಿವೆ. ಈ ಬಗ್ಗೆ ದೀಪಾವಳಿ ಬಳಿಕ ಎನ್ಡಿಎ ಸಭೆಯಲ್ಲಿ ನಿರ್ಧಾರವಾಗಿ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:ವಂಚನೆಯಿಂದ ಎನ್ಡಿಎಗೆ ಗೆಲುವು: ತೇಜಸ್ವಿ ಆರೋಪ

ಮಾಂಝಿ ಅವರು ಗಯಾದ ಇಮಾಂಗಂಜ್ನಲ್ಲಿ ಆರ್ಜೆಡಿ ಅಭ್ಯರ್ಥಿ ಉದಯ್ ನಾರಾಯಣ ಚೌಧರಿ ಅವರ ವಿರುದ್ಧ ಜಯ ಗಳಿಸಿದ್ದಾರೆ.

ಹಿಂದೂಸ್ತಾನ್ ಅವಾಂ ಮೋರ್ಚಾದ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆಯಾಗಿರುವ ಮಾಂಝಿ ಅವರು ಹೊಸ ಸ್ಥಾನದ ಬಗ್ಗೆ ನಿರಾಕರಿಸಲೂ ಇಲ್ಲ ಅಥವಾ ಅದನ್ನು ದೃಢಪಡಿಸಲೂ ಇಲ್ಲ. ಆದರೆ ಯಾವುದೇ ಸಚಿವ ಸ್ಥಾನದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.