ನವದೆಹಲಿ: ಈ ವರ್ಷದ ಜೂನ್ನಿಂದ ಆಗಸ್ಟ್ವರೆಗಿನ ಅವಧಿಯಲ್ಲಿ ಭಾರತದಲ್ಲಿ ಬಿಸಿಲಿನ ಧಗೆ ಹೆಚ್ಚು ಇತ್ತು. 1970ರ ನಂತರದ ವರ್ಷಗಳಲ್ಲಿ ಅತಿ ಹೆಚ್ಚು ಬಿಸಿಲಿನ ಪ್ರಖರತೆ ದಾಖಲಾದ ಎರಡನೇ ತ್ರೈಮಾಸಿಕ ಇದಾಗಿತ್ತು ಎಂದು ಅಮೆರಿಕದ ಹವಾಮಾನ ತಜ್ಞರು ಹೇಳಿದ್ದಾರೆ.

‘ಕ್ಲೈಮೇಟ್ ಸೆಂಟ್ರಲ್’ ಎಂಬ ಸಂಸ್ಥೆಯ ಹವಾಮಾನ ತಜ್ಞರು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಹೇಳಲಾಗಿದೆ.

ಈ ಮೂರು ತಿಂಗಳ ಅವಧಿಯಲ್ಲಿ ದೇಶದ ಒಟ್ಟು ಜನಸಂಖ್ಯೆ ಪೈಕಿ, ಮೂರನೇ ಒಂದರಷ್ಟು ಜನರು ಕನಿಷ್ಠ 7 ದಿನಗಳ ಕಾಲ ಅಪಾಯಕಾರಿ ಮಟ್ಟದ ಬಿಸಿಲಿನ ಪ್ರತಾಪ ಸಹಿಸಿಕೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

‘ಹವಾಮಾನ ಬದಲಾವಣೆಯಿಂದಾಗಿ ವಾತಾವರಣದ ಉಷ್ಣಾಂಶದಲ್ಲಿ ಹೆಚ್ಚಳ ಕಂಡುಬಂದಿದೆ. ಈ ಮೂರು ತಿಂಗಳ ಅವಧಿಯಲ್ಲಿ ದಕ್ಷಿಣ ಏಷ್ಯಾದಲ್ಲಿ ಗರಿಷ್ಠ ಸಂಖ್ಯೆ ಜನರು ತಾಪಮಾನದಲ್ಲಿನ ಹೆಚ್ಚಳ ಅನುಭವಿಸಿದರು. ಉಪಗ್ರಹ ಕಳುಹಿಸಿದ ದತ್ತಾಂಶಗಳು ಈ ಅಂಶವನ್ನು ಪುಷ್ಟೀಕರಿಸುತ್ತವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲಿನಂತಹ ಪಳಿಯುಳಿಕೆ ಇಂಧನಗಳ ದಹನ, ಮಾನವನ ಚಟುವಟಿಕೆಗಳಿಂದಾಗಿ ಜೂನ್ನಿಂದ ಆಗಸ್ಟ್ ವರೆಗಿನ ಅವಧಿಯಲ್ಲಿ ತಾಪಮಾನದಲ್ಲಿ ಹೆಚ್ಚಳ ಕಂಡುಬಂದಿತ್ತು. ಹವಾಮಾನ ಬದಲಾವಣೆಯಿಂದ ತಾಪಮಾನದಲ್ಲಿನ ಈ ಹೆಚ್ಚಳದಿಂದ ಜಗತ್ತಿನ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಬಾಧೆಗೆ ಒಳಗಾಗಿದ್ದರು’ ಎಂದು ವಿವರಿಸಲಾಗಿದೆ.

‘ಹವಾಮಾನದ ಬದಲಾವಣೆಯಿಂದಾಗಿ ಹೆಚ್ಚಾದ ತಾಪಮಾನದಿಂದ ಜಗತ್ತಿನ ಕೋಟ್ಯಂತರ ಜನರ ಆರೋಗ್ಯವು ಈ ಮೂರು ತಿಂಗಳ ಅವಧಿಯಲ್ಲಿ ಏರುಪೇರಾಗಿದೆ’ ಎಂದು ಕ್ಲೈಮೇಟ್ ಸೆಂಟ್ರಲ್ನ ವಿಜ್ಞಾನ ವಿಭಾಗದ ಉಪಾಧ್ಯಕ್ಷ ಆ್ಯಂಡ್ರ್ಯೂ ಪೆರ್ಶಿಂಗ್ ಹೇಳಿದ್ದಾರೆ.

ಜನರು ಮತ್ತು ಉದ್ಯಮದ ಮೇಲೆ ಹವಾಮಾನ ಬದಲಾವಣೆ ಹೆಚ್ಚು ಪರಿಣಾಮ ಉಂಟು ಮಾಡುತ್ತಿದೆ ಎಂಬುದು ಮತ್ತಷ್ಟು ಸಾಬೀತಾಗುತ್ತಿದೆ
ವೈಭವಪ್ರತಾಪ ಸಿಂಗ್ ಹವಾಮಾನ ಮತ್ತು ಸುಸ್ಥಿರತೆ ಉಪಕ್ರಮ (ಸಿಎಸ್ಐ) ನಿರ್ದೇಶಕ

ಪಳಿಯುಳಿಕೆ ಇಂಧನಗಳ ದಹನ ಒಡ್ಡುವ ಅಪಾಯದಿಂದ ವಿಶ್ವದ ಯಾವುದೇ ಪ್ರದೇಶ ದೇಶ ಅಥವಾ ನಗರವು ಸುರಕ್ಷಿತವಾಗಿಲ್ಲ
ಆ್ಯಂಡ್ರ್ಯೂ ಪೆರ್ಶಿಂಗ್ ಕ್ಲೈಮೇಟ್ ಸೆಂಟ್ರಲ್ನ ವಿಜ್ಞಾನ ವಿಭಾಗದ ಉಪಾಧ್ಯಕ್ಷ

ವರದಿಯಲ್ಲಿನ ಪ್ರಮುಖ ಅಂಶಗಳು

* ಜೂನ್ನಿಂದ ಆಗಸ್ಟ್ ವರೆಗಿನ ಅವಧಿಯಲ್ಲಿ ಭಾರತದ 2.5 ಕೋಟಿಗೂ ಹೆಚ್ಚು ಜನರು ಕನಿಷ್ಠ 60 ದಿನಗಳ ಕಾಲ ಅಧಿಕ ತಾಪಮಾನದಿಂದ ಬಸವಳಿದರು

* ತಿರುವನಂತಪುರ ಠಾಣೆ ಮುಂಬೈ ಪೋರ್ಟ್ಬ್ಲೇರ್ ವಸೈ–ವಿರಾರ್ ಕವರತ್ತಿ ನಗರಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚು ಇತ್ತು. ಈ ನಗರಗಳಲ್ಲಿ 70 ದಿನಗಳಿಗೂ ಹೆಚ್ಚು ಕಾಲ ಈ ವಿದ್ಯಮಾನ ಕಂಡುಬಂತು

* ವಿಶ್ವದ 42.6 ಕೋಟಿಗೂ ಅಧಿಕ ಜನರು ಕನಿಷ್ಠ 7 ದಿನಗಳ ಅಪಾಯಕಾರಿ ಮಟ್ಟದ ಬಿಸಿಲು ಅನುಭವಿಸಿದರು

* ಜಾಗತಿಕವಾಗಿ 2 ಶತಕೋಟಿ ಜನರು 30 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಅವಧಿಗೆ ವಿಪರೀತ ಬಿಸಿಲು ಅನುಭವಿಸಿದರು. ಈ ಬಿಸಿಲಿನ ಪ್ರಖರತೆ ಜನರ ಆರೋಗ್ಯಕ್ಕೆ ಅಪಾಯವನ್ನು ಒಡ್ಡುವಂತಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.