ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ ಗಡಿ ನಿಯಂತ್ರಣ ರೇಖೆಯಲ್ಲಿ ಕೇವಲ6ಬಾರಿ ಕದನ ವಿರಾಮ ಉಲ್ಲಂಘಿಸಿದ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿತು.

ಈ ಕುರಿತು ಲಿಖಿತ ಉತ್ತರ ನೀಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ‘2018 ರಲ್ಲಿ 2,140, 2019ರಲ್ಲಿ 3,479 ಮತ್ತು ಕಳೆದ ವರ್ಷ (2020ರಲ್ಲಿ) 5,133 ಕದನ ವಿರಾಮ ಉಲ್ಲಂಘಿಸಿದ ಘಟನೆಗಳು ವರದಿಯಾಗಿವೆ’ ಎಂದು ಅವರು ಮಾಹಿತಿ ನೀಡಿದರು.

ದೇಶದ ಗಡಿ ಭಾಗದಲ್ಲಿ ಕದನ ವಿರಾಮ ಒಪ್ಬಂದ ಕುರಿತು ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರ ನಡುವೆನಡೆದ ಮಾತುಕತೆಯ ನಂತರ, ಫೆಬ್ರವರಿ 25, 2021ರಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಪ್ಪಿ ಸಹಿ ಹಾಕಿದ್ದವು. ಫೆ. 24–25, 2021ರ ಮಧ್ಯರಾತ್ರಿಯಿಂದ ಗಡಿ ನಿಯಂತ್ರಣ ರೇಖೆ ಮತ್ತು ಇತರ ಎಲ್ಲ ವಲಯಗಳಲ್ಲಿರುವ ಗಡಿಯುದ್ದಕ್ಕೂ ಈ ಒಪ್ಪಂದ ಅನ್ವಯವಾಗುತ್ತದೆ ಎಂದು ಪ್ರಕಟಿಸಲಾಗಿತ್ತು.

ಈ ವರ್ಷದ ಜನವರಿಯಲ್ಲಿ 380 ಹಾಗೂ ಫೆಬ್ರವರಿಯಲ್ಲಿ 278 ಬಾರಿ ಕದನ ವಿರಾಮ ಉಲ್ಲಂಘನೆಯ ಘಟನೆಗಳು ವರದಿಯಾಗಿವೆ. ಮಾರ್ಚ್ನಲ್ಲಿ ಯಾವುದೇ ಘಟನೆಗಳೂ ನಡೆದ ವರದಿಯಾಗಿಲ್ಲ. ಏಪ್ರಿಲ್ನಲ್ಲಿ ಒಂದು ಮತ್ತು ಮೇನಲ್ಲಿ ಮೂರು ಹಾಗೂ ಜೂನ್ ನಲ್ಲಿ ಎರಡು ಘಟನೆಗಳು ವರದಿಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.