ನವದೆಹಲಿ: ಸಂವಿಧಾನದ 370ನೇ ವಿಧಿಯು ಇನ್ನು ಮುಂದೆ ಈ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂಬ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೊರಡಿಸಿದ್ದಾರೆ. ಅದರ ಪರಿಣಾಮವಾಗಿ, ಕಾಶ್ಮೀರ ಈವರೆಗೆ ಅನುಭವಿಸಿಕೊಂಡು ಬಂದಿದ್ದ ವಿಶೇಷ ಅಧಿಕಾರ ಮತ್ತು ಸೌಲಭ್ಯಗಳು ರದ್ದಾಗಿವೆ.

ಇದನ್ನೂ ಓದಿ:ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ

ಸೋಮವಾರ ಬೆಳಿಗ್ಗೆ ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಅಧಿಸೂಚನೆಯ ಬಗೆಗಿನ ನಿರ್ಣಯವನ್ನು ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದಾರೆ. ಅದರ ಜತೆಗೆ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಮಸೂದೆಯನ್ನೂ ಶಾ ಮಂಡಿಸಿದ್ದಾರೆ. ಇದರ ಪ್ರಕಾರ ಈ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗುವುದು. ಅಂದಹಾಗೆ ಈ ಮಸೂದೆ ಜಾರಿ ಮಾಡಬೇಕಾದರೆ ಇರುವ ಕಾನೂನು ಅಡೆತಡೆಗಳು ಏನಿದೆ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯವಾದಿನಮಿತ್ ಸಕ್ಸೇನಾ ಈ ರೀತಿ ವಿವರಿಸುತ್ತಾರೆ.

ಹಿನ್ನೆಲೆ
ಸಂವಿಧಾನದ 370ನೇವಿಧಿಯಲ್ಲಿ ‘ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ವಾಯತ್ತತೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಸಂವಿಧಾನದ XX1 ಅಡಿಯಲ್ಲಿ ಈ ವಿಧಿಯಿದ್ದು, ಜಮ್ಮು ಕಾಶ್ಮೀರಕ್ಕೆ ತಾತ್ಕಾಲಿಕ, ಬದಲಾವಣೆಯ ಮತ್ತು ವಿಶೇಷ ಬೇಡಿಕೆಗಳ ಜತೆಗೆ ವಿಶೇಷಾಧಿಕಾರ ನೀಡುವುದರ ಬಗ್ಗೆ ಇಲ್ಲಿ ಹೇಳಲಾಗಿದೆ. ಇತರ ರಾಜ್ಯಗಳಿಗೆ ನೀಡಿರುವ ವಿಶೇಷಾಧಿಕಾರಕ್ಕಿಂದ ಭಿನ್ನವಾಗಿ 370 ವಿಧಿಯು ತಾತ್ಕಾಲಿಕವಾಗಿರುತ್ತದೆ.

1954ರಲ್ಲಿ ರಾಷ್ಟ್ರಪತಿ ಆದೇಶ ಪ್ರಕಾರ ಕೇಂದ್ರ ಸರ್ಕಾರದ ಇತರ ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದ ಮೇಲೆ ಅನ್ವಯಿಸುವ ಮುನ್ನ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಸಮ್ಮತಿ ಅಗತ್ಯ ಎಂದು ಹೇಳಿದೆ. ಸಂವಿಧಾನದಲ್ಲಿ 35ಎ ಯನ್ನು ಸೇರಿಸುವ ಆದೇಶದ ಬಗ್ಗೆಯೂ ಸಾಕಷ್ಟು ವಾದ ವಿವಾದಗಳು ನಡೆದಿತ್ತು.

ಇದನ್ನೂ ಓದಿ:ದೇಶದೊಳಗಿದ್ದೂ ಪ್ರತ್ಯೇಕ ಸಂವಿಧಾನದ ಸವಲತ್ತು

ಅಲ್ಲಿಂದ ಇಲ್ಲಿಯವರೆಗೆ ಈ ರಾಜ್ಯಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ ಅಧಿಕಾರದ ಬಗ್ಗೆ 45ಕ್ಕಿಂತಲೂ ಹೆಚ್ಚಿನ ಆದೇಶಗಳನ್ನು ರಾಷ್ಟ್ರಪತಿಯವರು ಹೊರಡಿಸಿದ್ದಾರೆ.370ನೇ ವಿಧಿ ಮತ್ತು 35ಎ ಇವೆರಡ ಪರಿಣಾಮ ಮತ್ತು 1954ರ ರಾಷ್ಟ್ರಪತಿ ಆದೇಶದ ಜತೆಗೆ ಕೇಂದ್ರ ಸರ್ಕಾರ ಕಾನೂನು ವಿಧಿಸಬೇಕಾದರೆ ಅಲ್ಲಿನ ರಾಜ್ಯ ಸರ್ಕಾರದ ಅಂಗೀಕಾರ ಬೇಕು. ಭದ್ರತೆ, ವಿದೇಶ ವ್ಯವಹಾರ, ವಿತ್ತ ಹಾಗೂ ಸಂವಹನ ವಿಷಯದಲ್ಲಿ ಇದು ಅಗತ್ಯವಿಲ್ಲ.ವಿಶೇಧಿಕಾರವಿರುವ ಈ ರಾಜ್ಯದ ಜನರಿಗೆ ಅವರದ್ದೇ ಆದ ಕಾನೂನುಗಳಿವೆ.ಇತರ ಭಾರತೀಯರಿಗೆ ಹೋಲಿಸಿದರೆ ಪೌರತ್ವ, ಜಮೀನಿನ ಒಡೆತನ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಬೇರೆ ಕಾನೂನುಗಳಿವೆ. ಇದರಿಂದಾಗಿ ಇತರ ರಾಜ್ಯದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಜಮೀನು ಖರೀದಿಸಲು ಸಾಧ್ಯವಿಲ್ಲ.

ಕಾನೂನು ಸಮಸ್ಯೆಗಳು
370 (1) ಆರ್ಟಿಕಲ್ ಅಡಿಯಲ್ಲಿ ಹೇಳುವುದೇನೆಂದರೆ ಇತರ ಯಾವುದೇ ಸಂವಿಧಾನದ ಕರಾರುಗಳು ಅದನ್ನು ಬಿಗಿ ಮಾಡುವಂತಿಲ್ಲ. ರಾಷ್ಟ್ರಪತಿಯವರಿಗೆ ಮಾತ್ರ ವಿಶೇಷ ಅಧಿಕಾರವಿದೆ.ಯಾವುದೇ ಬದಲಾವಣೆ ತರುವುದಾದರೆ ರಾಜ್ಯದ ಅನುಮತಿ ಬೇಕೇ ಬೇಕು.ಏತನ್ಮಧ್ಯೆ, ಮೊದಲ ಸಮಸ್ಯೆ ಆರಂಭವಾಗುವುದೇ ಇಲ್ಲಿಂದ.ಈ ರಾಜ್ಯದಲ್ಲಿ ಯಾವುದೇ ಸರ್ಕಾರ ಇಲ್ಲ ಮತ್ತು ಜೂನ್ 2018ರಿಂದ ಇಲ್ಲಿ ರಾಷ್ಟ್ರಪತಿ ಆಡಳಿತವಿದೆ. ಹಾಗಾದರೆ ಚುನಾಯಿತ ಸರ್ಕಾರವು ಮೊದಲ ವಿಷಯವಾಗಿರುವುದರಿಂದ ರಾಜ್ಯಪಾಲರನ್ನು ಅದೇ ಪೀಠದಲ್ಲಿ ಇಡಬಹುದೇ?

ಎರಡನೆಯದ್ದಾಗಿ, ಚುನಾಯಿತ ಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಯಾರ ಆದೇಶವನ್ನು ರಾಜ್ಯಪಾಲರು ಪಾಲಿಸಬೇಕು? ಮೂರನೆಯದ್ದಾಗಿ, ಸಂಸದರೊಂದಿಗೆ ರಾಜ್ಯಪಾಲರು ಇಲ್ಲಿಯವರೆಗೆ ಯಾವುದೇ ಸಮ್ಮತಿ ನೀಡಿಲ್ಲ.ರಾಜ್ಯಪಾಲರಿಂದ ಸಮ್ಮತಿ ಪಡೆದು ಅದಕ್ಕೆ ಅಧಿಸೂಚನೆ ಹೊರಡಿಸಿದರೆ, ಅದರ ಕಾಲಾವಧಿಯನ್ನು ಪ್ರಶ್ನಿಸಬಹುದು ಮತ್ತು ಮುಂದಿನ ಹೆಜ್ಜೆಯಾದ ನೇರ ಘೋಷಣೆಯನ್ನು ತಪ್ಪಿಸಬಹುದು.

ಇದನ್ನೂ ಓದಿ:‘ದೊಡ್ಡ ತೀರ್ಮಾನ’ದ ಹಿಂದಿನ ಆರು ಮಂದಿ

ನಾಲ್ಕನೇ ವಿಷಯವೆಂದರೆ 370ನೇ ವಿಧಿಯು ಪರೋಕ್ಷವಾಗಿ ಅದನ್ನೇ ದುರ್ಬಲಗೊಳಿಸುತ್ತದೆ.370(3) ವಿಧಿಯ ಪ್ರಕಾರ ರಾಷ್ಟ್ರಪತಿಯವರು 370ನೇ ವಿಧಿಯನ್ನು ನಿಷ್ಕ್ರಿಯ ಎಂದು ಘೋಷಿಸಬಹುದು. ಹೀಗೆ ಘೋಷಿಸಬೇಕಾದರೆ ಸಂವಿಧಾನ ಸಭೆಯ ಶಿಫಾರಸು ಬೇಕೇ ಬೇಕು.ಈ ರೀತಿಯ ಘೋಷಣೆ ಇಲ್ಲದೇ ಇರುವಾಗ ಸಂವಿಧಾನ ಸಭೆಯನ್ನು ವಿಧಾನಸಭೆ ಅಥವಾ ಸಂಸತ್ತು ಎಂದು ಅರ್ಥೈಸಿಕೊಳ್ಳುವಂತಿಲ್ಲ.ಇನ್ನೊಂದೆಡೆ ಸಂವಿಧಾನ ಸಭೆಯು ಯಾವುದೇ ಕಾನೂನಿನ ಅಭಾವದಲ್ಲಿ ಪುನರ್ ರಚನೆ ಆಗುವುದಿಲ್ಲ. ಆದ್ದರಿಂದ ರಾಷ್ಟ್ರಪತಿಯವರ ಆದೇಶವನ್ನು ಅವಲೋಕಿಸಿದಾಗ, ರಾಜ್ಯದ ವಿಧಾನಸಭೆಯನ್ನು ಸಂವಿಧಾನ ಸಭೆ ಎಂದು ಪರಿಗಣಿಸಬಹುದಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ವಿಷಯವೊಂದನ್ನು ಮಂಡನೆ ಮಾಡದೆ, ಚರ್ಚೆ ಮಾಡದೆ ಮತ್ತು ವಾದ ಮಂಡನೆ ಮಾಡದೆ ಯಾವುದಾದರೊಂದು ಸಂವಿಧಾನ ವಿಶೇಷಾಧಿಕಾರಲ್ಲಿ ತಿದ್ದುಪಡಿ ಮಾಡಿದರೆ ಇತರ ಸಮಸ್ಯೆಗಳು ಸೃಷ್ಟಿಯಾಗದೇ ಇರುವುದಿಲ್ಲವೇ?

ಇದು ಮತ್ತೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಅದೇನೆಂದರೆ ಈ ವಿಶೇಷಾಧಿಕಾರವು ಸ್ವತಃ ದುರ್ಬಲವಾಗುತ್ತದೆಯೇ? ಈ ಬಗ್ಗೆ ಹೇಳುವುದಾದರೆ ಸವಕಲಾದ ಈ ಕಾನೂನನ್ನು ನೇರವಾಗಿಯೂ, ಪರೋಕ್ಷವಾಗಿ ಮಾಡುವಂತಿಲ್ಲ.370 (1) (d)ಯಡಿಯಲ್ಲಿರುವ 367 ವಿಧಿಯನ್ನು ತಿದ್ದುಪಡಿ ಮಾಡಿ ಅಧಿಕಾರಯುತವಾಗಿ ಮಾಡುವ ಮೂಲಕ ರಾಷ್ಟ್ರಪತಿ ಆದೇಶವು 370 ವಿಧಿಯನ್ನು ದುರ್ಬಲಗೊಳಿಸಿ 370(3) ವಿಧಿಯನ್ನು ಅಲ್ಲಗೆಳೆದಿದೆ.ಇದಕ್ಕೆ ಉತ್ತರವನ್ನು ನೀಡುವುದಾದರೆ 370(3) ವಿಧಿಯು ಇದಕ್ಕಿರುವ ಒಂದೇ ಒಂದು ಸೂತ್ರವಾಗಿದ್ದು 370 ವಿಧಿಯನ್ನು ದೂರವಿಡುವುದಕ್ಕಿರುವ ಒಂದೇ ಒಂದು ಸೂತ್ರವಾಗಿದೆ.

ಕೊನೆಯದಾಗಿ ರಾಷ್ಟ್ರಪತಿಯವರ ಆದೇಶದ ಮೇರೆಗೆ 367ನೇ ವಿಧಿಯನ್ನು ತಿದ್ದಲಾಗಿದೆ. ಸಂವಿಧಾನ ತಿದ್ದುಪಡಿ ಮಸೂದೆಗೆ ಉಭಯ ಸದನಗಳಲ್ಲಿ ಅಂಗೀಕಾರ ಲಭಿಸದೇ ಇದ್ದರೂ ರಾಷ್ಟ್ರಪತಿ ವಿಧಿಯಲ್ಲಿ ತಿದ್ದುಪಡಿ ಮಾಡುವುದಾದರೆ ರಾಷ್ಟ್ರಪತಿಯವರ ಆದೇಶವನ್ನೂ ಪ್ರಶ್ನಿಸಬೇಕಾಗುತ್ತದೆ.ರಾಷ್ಟ್ರಪತಿಯವರ ಆದೇಶವನ್ನು ಪ್ರಶ್ನಿಸಿದರೆ ಸುಪ್ರೀಂಕೋರ್ಟ್ನಲ್ಲಿ ಈ ಪ್ರಶ್ನೆಗಳು ಎದ್ದೇಳುತ್ತವೆ.

ಇದನ್ನೂ ಓದಿ:'ಕಾಶ್ಮೀರದಲ್ಲಿ ಭಾರತೀಯರು ಜಮೀನು ಖರೀದಿಸುವಂತಿಲ್ಲ'ಎಂದು 370 ವಿಧಿಯಲ್ಲಿ ಹೇಳಿಲ್ಲ

ಮುಂದೇನು?

370(3) ವಿಧಿಯನ್ನು ಬಳಸಿ ರಾಷ್ಟ್ರಪತಿಯವರ ಆದೇಶವು 370 ವಿಧಿಯನ್ನು ಹಿಂಪಡೆಯುವುದಾಗಲೀ ರದ್ದು ಮಾಡುವುದಾಗಲೀ ಮಾಡಿಲ್ಲ. ಆದಾಗ್ಯೂ,ಇದು 370ನೇ ವಿಧಿಯನ್ನು ದುರ್ಬಲಗೊಳಿಸಿ ಅದರ ಅಧಿಕಾರಕ್ಕೆ ಬಲತುಂಬಿದೆ.ಸುಪ್ರೀಂಕೋರ್ಟ್ನ 5 ನ್ಯಾಯಮೂರ್ತಿಗಳ ನ್ಯಾಯಪೀಠವು ಪೂರಣ್ಲಾಲ್ vs ರಾಷ್ಟ್ರಪತಿಯವರ ನಡುವಿನ ಪ್ರಕರಣದ ತೀರ್ಪು ವೇಳೆ ಮಾರ್ಚ್ 1961ರಲ್ಲಿ 370(1) ವಿಧಿಯನ್ನು ರಾಷ್ಟ್ರಪತಿ ತಿದ್ದುಪಡಿ ಮಾಡುವ ಅಧಿಕಾರದ ಬಗ್ಗೆ ಚರ್ಚಿಸಲಾಗಿತ್ತು.370 ವಿಧಿಯಡಿಯಲ್ಲಿ ರಾಷ್ಟ್ರಪತಿಯವರು ವಿಶೇಷಾಧಿಕಾರವನ್ನು ತಿದ್ದುಪಡಿ ಮಾಡಬಹುದು ಎಂದು ನ್ಯಾಯಾಲಯ ಹೇಳಿತ್ತು. ಆದರೆ ಸಂಸತ್ತಿನ ಅರಿವಿಗೆ ಬಾರದಂತೆ ಹೊಸ ವಿಧಿಯನ್ನು ಸೇರಿಸುವುದು ಅಥವಾ 370 ವಿಧಿಯನ್ನು ದುರ್ಬಲಗೊಳಿಸುವಂತೆ ರಾಷ್ಟ್ರಪತಿ ತಿದ್ದುಪಡಿ ಮಾಡಬಹುದೇ ಎಂಬುದರ ಬಗ್ಗೆ ನ್ಯಾಯಪೀಠ ಮೌನವಹಿಸಿತ್ತು.ರಾಷ್ಟ್ರಪತಿಯವರ ಆದೇಶವನ್ನು ಶೀಘ್ರದಲ್ಲೇ ಪ್ರಶ್ನಿಸುವ ಮತ್ತು ಸುಪ್ರೀಂಕೋರ್ಟ್ನ ವ್ಯಾಖ್ಯಾನ ಕೊನೆಗೂ ಮೇಲುಗೈ ಸಾಧಿಸುವ ಕ್ಷಣ ಬರಬಹುದು.ಅಲ್ಲಿಯವರಿಗೆ ಕಾಯೋಣ.

ಇದನ್ನೂಓದಿ

‘ಭೂಸ್ವರ್ಗ– ಭೂನರಕ’ದ ನಡುವೆ | ದಿನೇಶ್ ಅಮಿನ್ ಮಟ್ಟು ಬರಹ
ಮೂಲ ಕಾರ್ಯಸೂಚಿಯತ್ತ ಬಿಜೆಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ ಗುರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.