ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ವಿಧಾನಸಭೆ: ಕೇಜ್ರಿವಾಲ್‌ಗೆ 41, ಸಿಸೋಡಿಯಾಗೆ 40ನೇ ಸಂಖ್ಯೆಯ ಆಸನ ಮಂಜೂರು

Published : 26 ಸೆಪ್ಟೆಂಬರ್ 2024, 13:15 IST
Last Updated : 26 ಸೆಪ್ಟೆಂಬರ್ 2024, 13:15 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ 1ನೇ ಆಸನದಲ್ಲಿ ಕೂರುತ್ತಿದ್ದ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಅವರಿಗೆ, ಇದೀಗ 41ನೇ ಸಂಖ್ಯೆಯ ಆಸನವನ್ನು ನೀಡಲಾಗಿದೆ.

ದೆಹಲಿ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನ ಗುರುವಾರ ನಡೆಯಿತು.

ಮುಖ್ಯಮಂತ್ರಿ ಅತಿಶಿಗೆ 1ನೇ ಆಸನ ನೀಡಿದರೆ, ಕೇಜ್ರಿವಾಲ್‌ ಅವರ ಆಪ್ತ ಮನೀಶ್ ಸಿಸೋಡಿಯಾಗೆ ಕೇಜ್ರಿವಾಲ್ ಪಕ್ಕದ 40ನೇ ಆಸನ ನೀಡಲಾಗಿದೆ. 

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಅತಿಶಿ ಅವರು ಸಿಎಂ ಕಚೇರಿಯಲ್ಲಿ ಕೇಜ್ರಿವಾಲ್ ಕೂರುತ್ತಿದ್ದ ಕುರ್ಚಿಯನ್ನು ಸಾಂಕೇತಿಕವಾಗಿ ಹಾಗೇ ಇಟ್ಟು, ಪಕ್ಕದಲ್ಲಿ ಮತ್ತೊಂದು ಆಸನದಲ್ಲಿ ಕೂತು ಆಡಳಿತ ನಡೆಸುತ್ತಿದ್ದಾರೆ. ಇವರ ಈ ನಡೆಯನ್ನು ಬಿಜೆಪಿ, ಕಾಂಗ್ರೆಸ್ ಖಂಡಿಸಿದ್ದು, ಇದು ಮುಖ್ಯಮಂತ್ರಿ ಸ್ಥಾನಕ್ಕೆ ಮಾಡಿರುವ ಅಪಮಾನ ಎಂದಿವೆ.

ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್‌, ಇತ್ತೀಚೆಗಷ್ಟೇ ತಿಹಾರ್ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು. ಹೊರಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಾಮಾಣಿಕತೆಯ ಪ್ರಮಾಣಪತ್ರ ಪಡೆದ ನಂತರವಷ್ಟೇ ಅಧಿಕಾರಕ್ಕೆ ಮರಳುವುದಾಗಿ ಘೋಷಿಸಿದ್ದರು. 2025ರ ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT